ನಮಗೂ ಇಂಡೆಮ್ನಿಟಿ ಪ್ರೊಟೆಕ್ಷನ್ ಕೊಡಿ ಎಂದ ಸೀರಂ! ಏನದು ಇಂಡೆಮ್ನಿಟಿ ಪ್ರೊಟೆಕ್ಷನ್?

masthmagaa.com:

ಫೈಜರ್ ಮತ್ತು ಮಾಡೆರ್ನಾ ಲಸಿಕೆಗಳಿಗೆ ಇಂಡೆಮ್ನಿಟಿ ಪ್ರೊಟೆಕ್ಷನ್ ನೀಡಲು ಕೇಂದ್ರ ಸರ್ಕಾರ ಒಪ್ಪುವ ಸಾಧ್ಯತೆಗಳಿವೆ ಅಂತ ನಿನ್ನೆಯಷ್ಟೇ ವರದಿ ಬಂದಿತ್ತು. ಅದ್ರ ಬೆನ್ನಲ್ಲೇ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ತನಗೂ ಈ ಭದ್ರತೆ ನೀಡಬೇಕು ಅಂತ ಒತ್ತಾಯಿಸಿದೆ. ಇಂಡೆನ್ಮಿಟಿ ಪ್ರೊಟೆಕ್ಷನ್ ಅಂದ್ರೆ ಲಸಿಕೆ ಹಾಕಿದ ಬಳಿಕ ಯಾರಿಗಾದ್ರೂ ಹೆಚ್ಚು ಕಡ್ಮೆ ಆದ್ರೆ ಅದಕ್ಕೆ ಲಸಿಕೆಯ ಕಂಪನಿಯನ್ನೇ ಹೊಣೆ ಮಾಡಿ, ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗೋದಿಲ್ಲ. ಹೀಗಾಗಿ ವಿದೇಶಿ ಕಂಪನಿಯ ಲಸಿಕೆಗಳಿಗೆ ಈ ರೀತಿ ರಕ್ಷಣೆ ಸಿಗುತ್ತೆ ಅಂದ್ರೆ ನಮಗೂ ಬೇಕು. ಎಲ್ಲಾ ಕಂಪನಿಗಳಿಗೂ ಒಂದೇ ನಿಯಮ ಇರಲಿ ಅಂತ ಸೇರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. ಈ ನಡುವೆ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಸೇರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಮುಂದಾಗಿದ್ದು, ಅದಕ್ಕೆ ಬೇಕಿರೋ ಲೈಸೆನ್ಸ್​​​​ಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಇನ್ನು ಇಂಡೆಮ್ನಿಟಿ ಪ್ರೊಟೆಕ್ಷನ್ ಕುರಿತು ಭಾರತ ಸರ್ಕಾರ ಮತ್ತು ಫೈಜರ್- ಮಾಡೆರ್ನಾ ಸಂಸ್ಥೆಗಳ ನಡುವೆ ಒಪ್ಪಂದ ಫೈನಲ್ ಆದ್ರೆ, ಜುಲೈ ಅಂತ್ಯದ ವೇಳೆಗೆ ಈ ಕಂಪನಿಯ ಲಸಿಕೆಗಳು ಭಾರತವನ್ನು ಪ್ರವೇಶಿಸಲಿವೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply