ಪ್ರಪಂಚದಲ್ಲಿ ಮೂರೂವರೆ ಲಕ್ಷ ಜನ ಬಲಿ.. ಭಾರತದ ಉತ್ತಮ ಸಾಧನೆ..

masthmagaa.com:

ಕಳೆದ ವರ್ಷ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್​ಗೆ ಇಡೀ ಪ್ರಪಂಚದಲ್ಲಿ ಬರೋಬ್ಬರಿ 3,50,000 ಜನ ಬಲಿಯಾಗಿದ್ದಾರೆ. ಇದರಲ್ಲಿ ಶೇ. 28ರಷ್ಟು ಸಾವು ಅಮೆರಿಕ ಒಂದರಲ್ಲೇ ಆಗಿದೆ. ಮೃತಪಟ್ಟವರ ಪಟ್ಟಿಯಲ್ಲಿ ಬ್ರಿಟನ್​ ಎರಡನೇ ಸ್ಥಾನದಲ್ಲಿ ಮತ್ತು ಇಟಲಿ ಮೂರನೇ ಸ್ಥಾನದಲ್ಲಿ ಇದೆ ಅಂತ ಅಮೆರಿಕದ ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಹೇಳಿದೆ.

ಸೋಂಕಿತರ ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದ್ದರೂ, ಸಾವಿನ ಸಂಖ್ಯೆ ಭಾರತದಲ್ಲಿ ಕಡಿಮೆ ಇರೋದು ಒಳ್ಳೆಯ ವಿಚಾರ. ಭಾರತದಲ್ಲಿ 4,337 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಯಿಲೆಯ ತವರು ಚೀನಾದಲ್ಲಿ 4,638 ಮಂದಿ ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳು:

1. ಅಮೆರಿಕ: 99,000

2. ಬ್ರಿಟನ್: 37,000

3. ಇಟಲಿ: 33,000

4. ಫ್ರಾನ್ಸ್: 28,000

5. ಸ್ಪೇನ್: 27,000

6. ಬ್ರೆಜಿಲ್: 24,000

7. ಬೆಲ್ಜಿಯಂ: 9,000

8. ಜರ್ಮನಿ: 8,000

9. ಮೆಕ್ಸಿಕೊ: 8,000

10. ಇರಾನ್: 7,000

-masthmagaa.com

Contact Us for Advertisement

Leave a Reply