ಕಾಂಗ್ರೆಸ್‌ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ ಗೌರವ್‌ ವಲ್ಲಭ್‌!

masthmagaa.com:

ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಇದೀಗ ಕಾಂಗ್ರೆಸ್‌ ಪಕ್ಷದ ವಕ್ತಾರ ಗೌರವ್‌ ವಲ್ಲಭ್‌ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದಾರೆ. ಕಾಂಗ್ರೆಸ್‌ಗೆ ರಾಜಿನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿಗೆ ಸೇರಿದ್ದಾರೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಅವ್ರು ಕಾಂಗ್ರೆಸ್‌ ವಿರುದ್ಧ ಹೇಳಿಕೆ ನೀಡಿದ್ದಾರೆ. ʻನನಗೆ ಪ್ರತೀ ಬಾರಿ ಸನಾತನ ವಿರೋಧಿ ಘೋಷಣೆಗಳು ನೀಡೋಕಾಗಲ್ಲ. ಸಂಪತ್ತು ಸೃಷ್ಟಿಸೋರನ್ನ ನಿಂದಿಸಲು ಸಾಧ್ಯವಿಲ್ಲ. ಸೋ ಪಕ್ಷಕ್ಕೆ ರಾಜಿನಾಮೆ ಕೊಟ್ಟೆʼ ಅಂತೇಳಿದ್ದಾರೆ. ಇನ್ನು ಈ ಹಿಂದೆ ಟಿವಿ ಡಿಬೇಟ್‌ಗಳಲ್ಲಿ ಕಾಂಗ್ರೆಸ್‌ ಪರ ವಕಾಲತ್ತು ಮಾಡಿ ಪಕ್ಷವನ್ನ ಡಿಫೆಂಡ್‌ ಮಾಡ್ಕೊಳ್ತಿದ್ದ, ಜೀವೀರ್‌ ಶರ್ಗಿಲ್‌, ಶೆಹಜಾದ್‌ ಪೂನಾವಾಲ ಹಾಗೂ ರಿತಾ ಬಹುಗುಣಾ ಕೂಡ ಬಿಜೆಪಿ ಸೇರಿದ್ರು. ಈಗ ಆ ಲಿಸ್ಟಿಗೆ ಗೌರವ್‌ ವಲ್ಲಭ್‌ ಕೂಡ ಸೇರಿದ್ದಾರೆ.

-masthmagaa.com

Contact Us for Advertisement

Leave a Reply