ಬಾಸ್ಮತಿ ಅಕ್ಕಿ ಎಕ್ಸ್‌ಪೋರ್ಟ್‌ ದರ ಕಡಿಮೆ ಮಾಡಿದ ಸರ್ಕಾರ?

masthmagaa.com:

ಬಾಸ್ಮತಿ ಅಕ್ಕಿಯ ಎಕ್ಸ್‌ಪೋರ್ಟ್‌ ದರವನ್ನ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಅಂತ ತಿಳಿದು ಬಂದಿದೆ. ಪ್ರತೀ ಟನ್‌ಗೆ 950 ಡಾಲರ್‌ ಅಂದ್ರೆ ಸುಮಾರು 78,916 ರೂಪಾಯಿಗೆ ಇಳಿಸಲು ನಿರ್ಧರಿಸಿದೆ ಅಂತ ವರದಿಯಾಗಿದೆ. ಈ ಹಿಂದೆ ಆಗಸ್ಟ್‌ನಲ್ಲಿ ಬಾಸ್ಮತಿ ಅಕ್ಕಿಯ ಎಕ್ಸ್‌ಪೋರ್ಟ್‌ ದರವನ್ನ ಪ್ರತೀ ಟನ್‌ಗೆ 1,200 ಡಾಲರ್‌ ಅಂದ್ರೆ ಸುಮಾರು 99,684 ರೂಪಾಯಿ ಮಾಡಲಾಗಿತ್ತು. ಬೆಲೆ ಜಾಸ್ತಿ ಇರೋದ್ರಿಂದ ಭಾರತದ ಸರಕುಗಳಿಗೆ ಕಾಂಪಿಟಿಷನ್‌ ನೀಡೋದಕ್ಕೆ ಆಗ್ತಾ ಇಲ್ಲ ಅಂತ ರೈತರು ಮತ್ತು ಎಕ್ಸ್‌ಪೋರ್ಟರ್ಸ್‌ ಪ್ರತಿಭಟನೆ ಮಾಡಿರೋ ಕಾರಣದಿಂದ ಬೆಲೆ ಇಳಿಕೆ ಮಾಡಲಾಗ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply