ಸರ್ಕಾರಿ ನೌಕರರು ಇಂಥದ್ದೇ ಜಾಗಕ್ಕೆ ವರ್ಗಾವಣೆ ಮಾಡಿ ಅನ್ನಂಗಿಲ್ಲ: ಸುಪ್ರೀಂಕೋರ್ಟ್​​​

masthmagaa.com:

ಸರ್ಕಾರಿ ನೌಕರರು ನಮಗೆ ಇಂತಿಂಥಾ ಜಾಗಕ್ಕೇ ವರ್ಗಾವಣೆ ಮಾಡಿ ಅಂತ ಒತ್ತಾಯಿಸಲು ಸಾಧ್ಯವಿಲ್ಲ. ಸರ್ಕಾರ ಅಗತ್ಯತೆಗೆ ಅನುಗುಣವಾಗಿ ವರ್ಗಾವಣೆ ಮಾಡುತ್ತೆ ಅಂತ ಸುಪ್ರೀಂಕೋರ್ಟ್​ ಹೇಳಿದೆ. ಉತ್ತರ ಪ್ರದೇಶದಲ್ಲಿ ಉಪನ್ಯಾಸಕರೊಬ್ಬರು ತಮ್ಮ ವರ್ಗಾವಣೆ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದ್ದಕ್ಕೆ ಅಲಹಾಬಾದ್ ಹೈಕೋರ್ಟ್​ ಮೆಟ್ಟಿಲೇರಿದ್ರು. ಆದ್ರೆ ಕೋರ್ಟ್​ ಅವರ ಅರ್ಜಿಯನ್ನು ತಿರಸ್ಕರಿಸಿದ್ರು. ಉಪನ್ಯಾಸಕರು ಮತ್ತೆ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ರು. ಇದೀಗ ಸುಪ್ರೀಂಕೋರ್ಟ್​ ಕೂಡ ಆ ಲೆಕ್ಚರ್ ಅರ್ಜಿ ತಿರಸ್ಕರಿಸಿ, ಅಲಹಾಬಾದ್ ಹೈಕೋರ್ಟ್ ಆದೇಶ ಎತ್ತಿ ಹಿಡಿದಿದೆ.

-masthmagaa.com

Contact Us for Advertisement

Leave a Reply