ಲಸಿಕೆಯಿಂದ ರಿಯಾಕ್ಷನ್ ಆಗಿ ಸಾವು: ಮೊದಲ ಪ್ರಕರಣ ಖಚಿತಪಡಿಸಿದ ಸರ್ಕಾರ

masthmagaa.com:

ಕೊರೋನ ಲಸಿಕೆ ಅಡ್ಡಪರಿಣಾಮದಿಂದ ಪ್ರಾಣ ಹೋದ ಮೊದಲ ಅಧಿಕೃತ ಘಟನೆಯನ್ನ ಕೆಂದ್ರ ಸರ್ಕಾರ ಗುರುತಿಸಿದೆ. ಲಸಿಕೆ ಪಡೆದ ನಂತರ ರಿಯಾಕ್ಷನ್ ಆಗಿ ಜೀವ ಹೋದ ಒಟ್ಟು 31 ಇಂಥಾ ಪ್ರಕರಣಗಳನ್ನ ತನಿಖೆಗೆ ಒಳಪಡಿಸಲಾಗಿತ್ತು. ಇದರ ವರದಿಯನ್ನ ಈಗ AEFI ಕಮಿಟಿ ಸಲ್ಲಿಕೆ ಮಾಡಿದೆ. AEFI ಅಂದ್ರೆ ಅಡ್ವರ್ಸ್ ಈವೆಂಟ್ಸ್ ಫಾಲೋಯಿಂಗ್ ಇಮ್ಯುನೈಜೇಶನ್ ಅಂತ. ಅಂದ್ರೆ ಲಸಿಕೆ ಹಾಕಿದ ನಂತರ ಕಾಣುವ ಅಡ್ಡಪರಿಣಾಮದ ಘಟನೆಗಳು ಅಂತ. ಈ ಕಮಿಟಿಯ ವರದಿಯಲ್ಲಿ ಮಾರ್ಚ್ 8ರಂದು ಲಸಿಕೆ ಹಾಕಿಸಿಕೊಂಡ ವ್ಯಕ್ತಿಗೆ ಅನಾಫಿಲ್ಯಾಕ್ಸಿಸ್ ಅಂದ್ರೆ ಗಂಭೀರ ಅಲರ್ಜಿಕ್ ರಿಯಾಕ್ಷನ್ ಕಾಣಿಸಿಕೊಂಡು ಪ್ರಾಣ ಹೋಗಿದೆ ಅಂತಾ ಖಚಿತವಾಗಿದೆ. ಆದ್ರೆ ಜನವರಿಯಲ್ಲಿ ವರದಿಯಾದ ಇನ್ನೆರಡು ಪ್ರಕರಣಗಳಲ್ಲಿ ರಿಯಾಕ್ಷನ್ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ನೀಡಿದ ಪರಿಣಾಮ ಅವರು ಚೇತರಿಸಿಕೊಂಡಿದ್ದಾರೆ. ಲಸಿಕೆ ಹಾಕಿದ ಬಳಿಕ 30 ನಿಮಿಷ ಲಸಿಕಾ ಕೇಂದ್ರದಲ್ಲೇ ವೇಯ್ಟ್ ಮಾಡಬೇಕು ಅನ್ನೋ ನಿಯಮ ಇದೇ ಕಾರಣಕ್ಕೆ ಮಾಡಲಾಗಿದೆ. ಕೋಟ್ಯಂತರ ಜನಕ್ಕೆ ಲಸಿಕೆ ಹಾಕುವಾಗ ಅಪರೂಪದಲ್ಲೇ ಅತಿ ಅಪರೂಪದಲ್ಲಿ ಒಬ್ಬೊಬ್ಬರಿಗೆ ಈ ರೀತಿ ಆಗಬಹುದು. ಆಗ ಕೂಡಲೇ ಚಿಕಿತ್ಸೆ ಕೊಟ್ಟರೆ ಏನೂ ಆಗಲ್ಲ ಅಂತ ಸಮಿತಿ ಹೇಳಿದೆ. ಕೊರೋನ ಲಸಿಕೆಯಿಂದ ಲಾಭವೇ ಜಾಸ್ತಿ ಇದೆ. ಒಟ್ಟು ಪ್ರತಿ 10 ಲಕ್ಷ ಜನರಲ್ಲಿ ಬರೀ 2.7ರಷ್ಟು ಜನ ಮಾತ್ರ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನ ಬಂದು ಪ್ರಾಣ ಹೋಗೋದನ್ನ ಲಸಿಕೆ ದೊಡ್ಡ ಪ್ರಮಾಣದಲ್ಲಿ ತಡೀತಿದೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.

-masthmagaa.com

Contact Us for Advertisement

Leave a Reply