ಅತೀ ಹೆಚ್ಚು ಜನರನ್ನು ಜೈಲಿನಲ್ಲಿ ಇಟ್ಟಿರೋ ದೇಶ ಯಾವುದು ಗೊತ್ತಾ..?

ಹಾಯ್ ಫ್ರೆಂಡ್ಸ್.. ನಾವು ಆಗಾಗ ದೇಶದಲ್ಲಿ ಅವರು ಜೈಲಿಗ್ ಹೋದ್ರು, ಇವರು ಜೈಲಿಗ್ ಹೋದ್ರು ಅಂತ ಕೇಳ್ತಾ ಇರ್ತೀವಿ. ಸಣ್ ಸಣ್ ಕಳ್ಳತನದಿಂದ ಹಿಡಿದು ದೊಡ್ಡ ದೊಡ್ಡ ಆರ್ಥಿಕ ಅಪರಾಧಗಳನ್ನು ಮಾಡಿ ಜೈಲಿಗೆ ಹೋಗೋರನ್ನೂ ನೋಡಿದ್ದೇವೆ. ಈಗ ಡಿ.ಕೆ ಶಿವಕುಮಾರ್ ಅವರೇ ಜೈಲಿಗೆ ಹೋಗಿ ತನಿಖೆ ಎದುರಿಸ್ತಾ ಇದ್ದಾರೆ. ಮತ್ತೊಂದ್ಕಡೆ ಕೇಂದ್ರದ ಮಾಜಿ ಸಚಿವ ಪಿ.ಚಿದರಂಬರಂ ಕೂಡ ಜೈಲಲ್ಲಿದ್ದಾರೆ. ಇನ್ ಕೆಲವರು ಜೈಲಿಗ್ ಹೋಗ್ತೀವಿ ಅನ್ನೋ ಭಯದಲ್ಲಿ ದೇಶಾನೇ ಬಿಟ್ಟು ಓಡಿಹೋಗಿದ್ದಾರೆ. ಮಲ್ಯ, ನೀರವ್ ಮೋದಿ ಅವರೆಲ್ಲಾ ಫಾರಿನ್ ಗೆ ಹಾರಿ ಜೈಲಿಗೆ ಹೋಗೋದ್ರಿಂದ ತಪ್ಪಿಸಿಕೊಂಡಿದ್ದಾರೆ. ಹೀಗೆ ಜೈಲಿಗೆ ಅವರು ಹೋದ್ರು, ಇವ್ರು ಹೋದ್ರು.. ಮೋಸ ಮಾಢಿ ಓಡೋದ್ರು ಹೀಗೆಲ್ಲಾ ನಾವು ಕೇಳ್ತಾನೇ ಇರ್ತೀವಿ. ಒಟ್ನಲ್ಲಿ ಜೈಲು ಅಂದ್ರೆ ಅಷ್ಟೊಂದು ಭಯಾನಕ ಅನ್ನೋ ಮನಸ್ಥಿತಿ ಭಾರತೀಯರಲ್ಲಿದೆ. ಇದ್ನೆಲ್ಲಾ ನೋಡ್ತಾ ಇದ್ರೆ ಇಡೀ ವಿಶ್ವದಲ್ಲಿ ಅತೀ ಹೆಚ್ಚು ಜನರನ್ನು ಜೈಲಿಗೆ ಹಾಕಿರೋ ದೇಶ ಯಾವ್ದು ಅನ್ನೋ ಪ್ರಶ್ನೆ, ಕುತೂಹಲ ಮೂಡುತ್ತೆ. ಆ ಕುತೂಹಲಕ್ಕೆ ನಾವು ಇವತ್ತು ಉತ್ತರ ಹೇಳ್ತೀವಿ. ಆದ್ರೆ ಈಗಲೇ ಹೇಳಿಬಿಡ್ತೀವಿ ನೋಡಿ.. ನಿಮಗೆ ಖಂಡಿತ ಆಶ್ಚರ್ಯ ಆಗುತ್ತೆ. ಹಾಗಾದ್ರೆ ತಡ ಮಾಡೋದು ಯಾಕೆ..? ಬನ್ನಿ ಅತೀ ಹೆಚ್ಚು ಖೈದಿಗಳನ್ನು ಹೊಂದಿರೋ ದೇಶ ಯಾವುದು..? ಹೆಚ್ಚು ಜನರನ್ನು ಜೈಲಿಗೆ ಹಾಕಿರೋ ದೇಶಗಳ ಪೈಕಿ ಭಾರತಕ್ಕೆ ಎಷ್ಟನೇ ಸ್ಥಾನ ಸಿಗುತ್ತೆ ಅಂತ ನೋಡ್ತಾ ಹೋಗೋಣ..

ಫ್ರೆಂಡ್ಸ್.. ಈ ಲಿಸ್ಟ್ ನೋಡ್ತಾ ಹೋದ್ರೆ ನಿಮಗೆ ಶಾಕ್ ಆಗುತ್ತೆ. ಯಾಕಂದ್ರೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೈನಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಅಂತ ನೀವು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು.

ಅತೀ ಹೆಚ್ಚು ಪ್ರಜೆಗಳನ್ನು ಜೈಲಿನಲ್ಲಿಟ್ಟ ದೇಶ ಅಮೆರಿಕಾ..!

ಹೌದು ಫ್ರೆಂಡ್ಸ್. ದೊಡ್ಡ ಪ್ರಜಾಪ್ರಭುತ್ವ ದೇಶ.. ಅದು ಇದು ಅಂತ ಬಡಾಯಿಕೊಚ್ಚಿಕೊಳ್ಳುವ ದೇಶ ಅಮೆರಿಕಾ ಅತೀ ಹೆಚ್ಚು ಕೈದಿಗಳನ್ನು ಬಂಧಿಸಿಟ್ಟ ದೇಶವಾಗಿದೆ. ಅದು ಯಾವ ರೇಂಜ್ ಗೆ ಅಂದ್ರೆ ಇಲ್ಲಿನ ಪ್ರತಿ 1 ಲಕ್ಷದಲ್ಲಿ 724 ಮಂದಿ ಜೈಲಿನಲ್ಲಿದ್ದಾರೆ. ದೇಶದ ಒಟ್ಟು ಜನಸಂಖ್ಯೆ 32 ಕೋಟಿ ಇದ್ದು, ಅದರಲ್ಲಿ 21 ಲಕ್ಷದ 93 ಸಾವಿರದ 798 ಜನ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಇಡೀ ಜಗತ್ತಿನ ಜೈಲಿನಲ್ಲಿರೋ ಕೈದಿಗಳ ಒಟ್ಟು ಸಂಖ್ಯೆಯಲ್ಲಿ ಅರ್ಧದಷ್ಟು ಕೈದಿಗಳು ಅಮೆರಿಕಾದಲ್ಲೇ ಇದ್ದಾರೆ.

2ನೇ ಸ್ಥಾನದಲ್ಲಿ ಬರುತ್ತೆ ಕಮ್ಯೂನಿಸ್ಟ್ ಚೀನಾ..!
ಯೆಸ್.. 2ನೇ ಸ್ಥಾನದಲ್ಲಿ ಕಮ್ಯೂನಿಸ್ಟ್ ದೇಶ ಚೀನಾ ಬರುತ್ತೆ. ಇದರಲ್ಲಿ ಅಚ್ಚರಿಪಡೋ ಅಗತ್ಯ ಇಲ್ಲ. ಯಾಕಂದ್ರೆ ಚೀನಾ ಒಂದು ಕಮ್ಯೂನಿಸ್ಟ್ ದೇಶ. ಅಲ್ಲದೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರೋ ದೇಶ. ಇಲ್ಲಿ ಹೆಚ್ಚು ಕೈದಿಗಳಿರೋದು ಸಾಮಾನ್ಯ ಅನ್ನಬಹುದು. 138 ಕೋಟಿ ಜನಸಂಖ್ಯೆಯಲ್ಲಿ 15 ಲಕ್ಷದ 48 ಸಾವಿರದ 498 ಮಂದಿ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಸರಾಸರಿಯಲ್ಲಿ ನೋಡೋದಾದ್ರೆ 1 ಲಕ್ಷದಲ್ಲಿ 118 ಮಂದಿ ಜೈಲಿನಲ್ಲಿದ್ದಾರೆ.

3ನೇ & 4ನೇ ಸ್ಥಾನದಲ್ಲಿ ರಷ್ಯಾ, ಬ್ರೆಜಿಲ್..!
ಫ್ರೆಂಡ್ಸ್, ಹೆಚ್ಚು ಕೈದಿಗಳನ್ನು ಹೊಂದಿರೋ ದೇಶಗಳ ಈ ಪಟ್ಟಿಯಲ್ಲಿ ರಷ್ಯಾ 3ನೇ ಸ್ಥಾನವನ್ನು ತುಂಬುತ್ತೆ. ಇಲ್ಲಿ 14 ಕೋಟಿ ಜನರಿದ್ದು, 8 ಲಕ್ಷದ 74 ಸಾವಿರ ಜನ ಜೈಲಿನಲ್ಲಿದ್ದಾರೆ. ಇನ್ನು ಬ್ರೆಜಿಲ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಇಲ್ಲಿನ 20 ಕೋಟಿ ಜನರಲ್ಲಿ 3 ಲಕ್ಷದ 71 ಸಾವಿರ 482 ಮಂದಿ ಜೈಲಿನಲ್ಲಿದ್ದಾರೆ.

ಫ್ರೆಂಡ್ಸ್.. ನೀವೆಲ್ಲಾ ಕಾಯುತ್ತಿದ್ದ ಭಾರತದ ಸರದಿ ಈಗ ಬಂತು ನೋಡಿ..

ಹೆಚ್ಚು ಕೈದಿಗಳಿರೋ ದೇಶದ ಲಿಸ್ಟ್‍ನಲ್ಲಿ ಭಾರತಕ್ಕೆ 5ನೇ ಸ್ಥಾನ..!
ಯೆಸ್.. ನೀವು ಕೇಳಿದ್ದು ನಿಜ.. ಭಾರತ ಅತೀ ಹೆಚ್ಚು ಜನಸಂಖ್ಯೆ ಹೊಂದಿರೋ 2ನೇ ದೇಶ. ಮೊದಲ ಸ್ಥಾನದಲ್ಲಿರೋ ಚೀನಾಗಿಂತ ಸ್ವಲ್ಪ ಕಡಿಮೆಯಷ್ಟೆ. ಆದ್ರೆ ಅಮೆರಿಕಾಗೆ ಹೋಲಿಸಿದ್ರೆ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚು ಜನಸಂಖ್ಯೆ ಭಾರತದಲ್ಲಿದೆ. ಆದ್ರೆ ಇಲ್ಲಿನ ಕೈದಿಗಳ ಸಂಖ್ಯೆಯೂ ತುಂಬಾನೆ ಕಡಿಮೆ ಇದೆ. 130 ಕೋಟಿ ಜನರಲ್ಲಿ 3 ಲಕ್ಷದ 32 ಸಾವಿರದ 112 ಮಂದಿ ಮಾತ್ರ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಸರಾಸರಿ ನೋಡೋದಾದ್ರೆ 1 ಲಕ್ಷದಲ್ಲಿ 30 ಮಂದಿ ಮಾತ್ರ ಜೈಲುಹಕ್ಕಿಗಳಾಗಿದ್ದಾರೆ. ಹಾಗಂತ ನಮ್ಮ ದೇಶದಲ್ಲಿರೋ ಜೈಲುಗಳೇನು ಖಾಲಿ ಇವೆ ಎಂದು ಅರ್ಥವಲ್ಲ. ನಮ್ಮಲ್ಲಿರೋ ಎಲ್ಲಾ ಜೈಲುಗಳೂ ಭರ್ತಿಯಾಗೇ ಇವೆ. ಆದ್ರೂ ಕೂಡ ಅಮೆರಿಕಾ, ಚೀನಾ, ರಷ್ಯಾ, ಬ್ರೆಜಿಲ್ ಗೆ ಹೋಲಿಸಿದ್ರೆ ನಮ್ಮ ದೇಶದ ಖೈದಿಗಳ ಸಂಖ್ಯೆ ತುಂಬಾನೆ ಕಡಿಮೆ ಇದೆ ಅಂತಾನೇ ಹೇಳಬಹುದು. ಇದನ್ನು ಎರಡು ರೀತಿಯಲ್ಲಿ ನೋಡಬಹುದು. ಮೊದಲನೆಯದಾಗಿ ಭಾರತದಲ್ಲಿ ಸ್ವೇಚ್ಛಾಚಾರವಾಗಿ, ಹೆಚ್ಚು ಸ್ವತಂತ್ರವಾಗಿ, ಇಷ್ಟ ಬಂದ ರೀತಿಯಲ್ಲಿ ಬದುಕಲು ಅವಕಾಶ ಇದೆ ಅಂತ ನೋಡಬಹುದು. ಇನ್ನೊಂದು ರೀತಿಯಲ್ಲಿ ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ. ತಪ್ಪು ಮಾಡಿದವರು ಸುಲಭದಲ್ಲಿ ಬಚಾಚ್ ಆಗ್ತಾರೆ. ಕೋರ್ಟ್‍ಗಳಲ್ಲಿ ವರ್ಷಾನುಗಟ್ಟಲೆ ಕೇಸ್ ನಡೆಯುತ್ತೆ. ಲಕ್ಷಾಗಟ್ಟಲೆ ಕೇಸ್ ಬಾಕಿ ಇದೆ. ಜಡ್ಜ್, ಕೋರ್ಟ್ ಗಳ ಸಂಖ್ಯೆ ಕಡಿಮೆ ಇದೆ. ಕೈದಿಗಳ ಸಂಖ್ಯೆ ಕಡಿಮೆ ಇರಲು ಇದೂ ಒಂದು ಕಾರಣವಾಗಿರಬಹುದು.

ಇವಿಷ್ಟು ಅತೀ ಹೆಚ್ಚು ಕೈದಿಗಳನ್ನು ಹೊಂದಿರೋ ಜಗತ್ತಿನ ಟಾಪ್ 5 ದೇಶಗಳು.. ಇನ್ನು ಸೌದಿ ಅರೇಬಿಯಾದಂತ ರಾಷ್ಟ್ರಗಳು ಈ ಲಿಸ್ಟ್‍ನಲ್ಲಿ ಬರಲ್ಲ. ಯಾಕಂದ್ರೆ ಅಲ್ಲಿ ಕೈದಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಅಲ್ಲಿರೋ ಭಯಾನಕ ಕಾನೂನುಗಳಿಗೆ ಹೆದರೋ ಜನ ಅಪರಾಧಗಳನ್ನು ಮಾಡೋದೇ ಕಡಿಮೆ ಎನ್ನಬಹುದು.

Contact Us for Advertisement

Leave a Reply