ಇಸ್ರೇಲ್‌ Vs ಪ್ಯಾಲಸ್ತೀನ್!‌ ಒಂದು ಪೈಸೆನು ಬೇಡ ಅಂತು ಹಮಾಸ್‌

masthmagaa.com:

ಗಾಜಾ ಮರುನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಸಮುದಾಯದ ನೆರವಿನ ಒಂದೇ ಒಂದು ಪರ್ಸೆಂಟ್​ನ್ನು ಟಚ್ ಕೂಡ ಮಾಡಲ್ಲ ಅಂತ ಹಮಾಸ್ ಪ್ರಮಾಣ ಮಾಡಿದೆ. ಇಸ್ರೇಲ್ ದಾಳಿಯಿಂದ ಅಪಾರ ಹಾನಿಗೊಳಗಾಗಿರೋ ಗಾಜಾಗೆ ಅಂತಾರಾಷ್ಟ್ರೀಯ ಸಮುದಾಯ ಸಹಾಯ ಹಸ್ತ ಚಾಚ್ತಿದೆ. ಪ್ರಮುಖವಾಗಿ ಅಮೆರಿಕ. ಆದ್ರೆ ಇದನ್ನು ಪ್ಯಾಲೆಸ್ತೇನಿಯನ್ ನ್ಯಾಷನಲ್ ಅಥಾರಿಟಿ ಮೂಲಕ ಮಾಡ್ತೀವೇ ಹೊರತು.. ಗಾಜಾದಲ್ಲಿರೋ ಹಮಾಸ್ ಮೂಲಕ ಮಾಡಲ್ಲ. ನೆರವು ಅವರ ಕೈ ಸೇರದಂತೆ ನೋಡಿಕೊಳ್ಳಬೇಕು ಅಂತ ಹೇಳಿದ್ರು ಜೋ ಬೈಡೆನ್. ಈ ಬಗ್ಗೆ ಪ್ರತಿಕ್ರಿಯಿಸಿರೋ ಹಮಾಸ್ ಲೀಡರ್ ಯಾಹ್ಯಾ, ಗಾಜಾ ಮರು ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಮತ್ತು ಅರಬ್ ರಾಷ್ಟ್ರಗಳ ನೆರವನ್ನು ಸ್ವಾಗತಿಸುತ್ತೇವೆ. ಅದನ್ನ ಪಾರದರ್ಶಕ ಮತ್ತು ನಿಸ್ಪಕ್ಷಪಾತವಾಗಿ ಹಂಚಲಾಗುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ನೆರವಲ್ಲಿ ಒಂದೇ ಒಂದು ಪರ್ಸೆಂಟ್​ನಷ್ಟು ನಾವು ತೆಗೆದುಕೊಳ್ಳಲ್ಲ..ಜೊತೆಗೆ ಈ ಹಿಂದೆಯೂ ತೆಗೆದುಕೊಂಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply