ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ವಿಡಿಯೋ ವೈರಲ್‌!

masthmagaa.com:

ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಉಗ್ರ ನಿಜ್ಜರ್‌ನ ಹತ್ಯೆ ಮಾಡಿರೋ ವಿಡಿಯೋ ವೈರಲ್‌ ಆಗಿದೆ. CCTV ಫುಟೇಜ್‌ನ್ನ ಕೆನಡಾದಲ್ಲಿ ಪಬ್ಲಿಕ್‌ ಮಾಡಲಾಗಿದೆ. ʻಇದು ಸುಪಾರಿ ಕೊಡಿಸಿ ಮಾಡಿಸಿರೋ ಕೆಲಸ. ಸಶಸ್ತ್ರ ಗುಂಪೊಂದು ನಿಜ್ಜರ್‌ನ ಹತ್ಯೆ ಮಾಡಿದೆ ಅಂತ ಕೆನಡಾ ಮೂಲದ CBC ನ್ಯೂಸ್‌ ಚಾನೆಲ್‌ ವರದಿ ಮಾಡಿದೆ. ಈ ಚಾನೆಲ್‌ನ ʻದಿ ಫಿಫ್ತ್‌ ಎಸ್ಟೇಟ್‌ʼ ಅನ್ನೋ ಇನ್ವೆಸ್ಟಿಗೇಟಿವ್‌ ಡಾಕ್ಯುಮೆಂಟರಿಯಲ್ಲಿ ಈ ವಿಡಿಯೋವನ್ನ ಹರಿಬಿಡಲಾಗಿದೆ. ಕಳೆದ ವರ್ಷ ಜೂನ್‌ 18 ರಂದು ಕೆನಡಾದ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ನಡೆದ ನಿಜ್ಜರ್‌ ಹತ್ಯೆಯಲ್ಲಿ 6 ಮಂದಿ ಇನ್ವಾಲ್ವ್‌ ಆಗಿದ್ರು ಅಂತ ಆ ಡಾಕ್ಯುಮೆಂಟರಿಯಲ್ಲಿ ತಿಳಿಸಲಾಗಿದೆ. ಇದ್ರಲ್ಲಿ ಉಗ್ರ ನಿಜ್ಜರ್‌ ಅಲ್ಲಿನ ಗುರುದ್ವಾರ ಒಂದ್ರ ಪಾರ್ಕಿಂಗ್‌ ಲಾಟ್‌ನಿಂದ ತಮ್ಮ ಪಿಕ್‌ಅಪ್‌ ಟ್ರಕ್‌ನಲ್ಲಿ ಹೊರಬರ್ತಿರೋವಾಗ ಬಿಳಿ ಸಿಡ್ಯಾನ್‌ ಕಾರ್‌ ನಿಜ್ಜರ್‌ನನ್ನ ಅಡ್ಡಗಟ್ಟಿದೆ. ಕಾರಿನಿಂದ ಇಳಿದ ಇಬ್ಬರು ವ್ಯಕ್ತಿಗಳು ನಿಜ್ಜರ್‌ ಬಳಿ ಬಂದು..ಆತನಿಗೆ ಗುಂಡು ಹಾರಿಸಿದ್ದಾರೆ. ಗಮನಿಸಬೇಕಾದ ಸಂಗತಿ ಅಂದ್ರೆ ಸಿಡ್ಯಾನ್‌ ಕಾರ್‌ನಲ್ಲಿ ಬಂದ ಅವರು, ಟೊಯೋಟಾ ಕ್ಯಾಮ್ರಿ ಕಾರ್‌ನಲ್ಲಿ ಪರಾರಿಯಾಗಿದ್ದಾರೆ. ಸದ್ಯ ನಿಜ್ಜರ್‌ನ ಹತ್ಯೆ ನಡೆದು 9 ತಿಂಗಳ ಬಳಿಕ ಈ CCTV ಫುಟೇಜ್‌ ರಿಲೀಸ್‌ ಆಗಿದ್ದು ಭಾರೀ ವೈರಲ್‌ ಆಗ್ತಿದೆ. ಅಂದ್ಹಾಗೆ ಈ ಉಗ್ರ ನಿಜ್ಜರ್‌ ಹತ್ಯೆ ವಿಚಾರವಾಗಿ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿರುಕು ಉಂಟಾಗಿತ್ತು. ಯಾವ್ದೇ ಸಾಕ್ಷ್ಯಾ ಆಧಾರಗಳಿಲ್ಲದೆ… ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಭಾರತದ ಮೇಲೆ ಆರೋಪ ಮಾಡಿದ್ರು. ಭಾರತದ ಏಜೆಂಟ್‌ಗಳು ನಿಜ್ಜರ್‌ನ ಹತ್ಯೆ ಮಾಡಿದ್ದು ಅಂತ ಭಾರತ ಮೇಲೆ ಗೂಬೆ ಕೂರಿಸಿದ್ರು. ಯಾಕಂದ್ರೆ ಈ ನಿಜ್ಜರ್‌ ಭಾರತದಲ್ಲಿ ವಿದ್ವಂಸಕ ಸೃಷ್ಟಿಸೋಕೆ ಹೊಂಚು ಹಾಕಿದ್ದ. ವಿದೇಶದಲ್ಲಿ ಕೂತು ಭಾರತದ ವಿರುದ್ದ ಮಾತಾಡ್ತಿದ್ದ. ಹೀಗಾಗಿ ಭಾರತದ ರಾ ಏಜೆಂಟರೇ ಈತನನ್ನ ಕೊಂದಿರಬೋದು ಅಂತ ಕೆನಡ ಪ್ರಧಾನಿ ಹೇಳಿದ್ರು. ಭಾರತ ಮಾತ್ರ ಈ ಆರೋಪವನ್ನ ತಳ್ಳಿ ಹಾಕ್ತಲೇ ಬಂತು…. ಸೂಕ್ತ ಎವಿಡೆನ್ಸ್‌ ಇಡಿ ಅಂತ ಡಿಮಾಂಡ್‌ ಮಾಡಿತ್ತು. ಆದ್ರೆ ಕೆನಡ ಮಾತ್ರ ಯಾವುದೇ ಆಧಾರ ಕೊಟ್ಟಿರಲಿಲ್ಲ. ಅಲ್ದೆ ಇತ್ತೀಚಿಗಷ್ಟೇ ಕೆನಡದ ಇಂಟಲಿಜೆನ್ಸ್‌ ಮುಖ್ಯಸ್ಥರು ಇದರ ವಿರುದ್ದ ಮಾತಾಡಿದ್ರು. ಸಿಖ್ಖರನ್ನ ಓಲೈಸೋಕೆ ʻಇಮ್ಮೆಚ್ಯೂರ್‌ ಪಾಲಿಟಿಕ್ಸ್‌ʼನಿಂದ ಜಸ್ಟೀನ್‌ ಟ್ರುಡು ಈತರ ಆರೋಪ ಮಾಡ್ತಿದ್ದಾರೆ ಅಂತ ಹೇಳಿದ್ರು. ಈ ನಡುವೆಯೇ ಈಗ ಈ ವಿಡಿಯೋ ರಿಲೀಸ್‌ ಆಗಿದೆ.

-masthmagaa.com

Contact Us for Advertisement

Leave a Reply