ಚುನಾವಣೆಯಲ್ಲಿ ಸೋಲು..! ಸೋನಾಲಿ ಪೋಗಟ್ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ವೈರಲ್…

ಹರಿಯಾಣ: ಆದಂಪುರ ಕ್ಷೇತ್ರದಲ್ಲಿ ಬಿಜೆಪಿಯ ಟಿಕ್​ಟಾಕ್ ಸ್ಟಾರ್ ಸೋನಾಲಿ ಪೋಗಟ್​ ಸೋಲನುಭವಿಸಿದ ಬಳಿಕ ಅವರ ವಿಡಿಯೋವೊಂದು ಫುಲ್ ವೈರಲ್ ಆಗ್ತಿದೆ. ಇದರಲ್ಲಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ತುಂಬಾ ಹಳೆಯದಾಗಿದ್ದರೂ ಕೂಡ ಸೋನಾಲಿ ಫೋಗಟ್ ಸೋಲಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಖ್ಯಾತಿ ಪಡೆದಿದ್ದ ಸೋನಾಲಿ ಪೋಗಟ್​​ಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದ್ರೆ ಈಕೆ ಕಾಂಗ್ರೆಸ್ ನಾಯಕ ಕುಲದೀಪ್ ಬಿಶ್ನೋಯ್ ವಿರುದ್ಧ ಸೋಲನುಭವಿಸಿದ್ದಾರೆ. ಕುಲದೀಪ್​​​ಗೆ ಬರೋಬ್ಬರಿ ಶೇಕಡ 51ರಷ್ಟು ಮತಗಳು ಸಿಕ್ಕಿದ್ದರೆ, ಸೋನಾಲಿ ಪೋಗಟ್​ಗೆ ಕೇವಲ ಶೇ.27ರಷ್ಟು ಮತಗಳು ಸಿಕ್ಕಿವೆ.

ಸೋನಾಲಿ ಪೋಗಟ್​​​​ಗೆ ಟಿಕ್​​​ಟಾಕ್​​ನಲ್ಲಿ 1 ಲಕ್ಷ ಫಾಲೋವರ್ಸ್​ ಇದ್ದು, 200ಕ್ಕೂ ಹೆಚ್ಚು ವಿಡಿಯೋಗಳನ್ನು ಹಾಕಿದ್ದಾರೆ. ಇದೀಗ ಅದೇ ವಿಡಿಯೋಗಳನ್ನು ಮುಂದಿಟ್ಟುಕೊಂಡು ನೆಟ್ಟಿಗರು ಸೋನಾಲಿ ಪೋಗಟ್ ಸೋಲಿನ ನೋವನ್ನು ಅಪಹಾಸ್ಯ ಮಾಡುತ್ತಿದ್ಧಾರೆ.

https://twitter.com/iKaustubhMishra/status/1187344037642039296

Contact Us for Advertisement

Leave a Reply