ನ.20ರಂದು ಕೊರೋನಾ ಲಸಿಕೆ ಹಾಕಿಸಿಕೊಂಡ ಹರಿಯಾಣದ ಸಚಿವರಿಗೆ ಕೊರೋನಾ..!

masthmagaa.com:

ಹರಿಯಾಣ: ನವೆಂಬರ್​​ನಲ್ಲಿ ಭಾರತ್ ಬಯೋಟೆಕ್​​ನ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಒಳಪಟ್ಟಿದ್ದ ಹರಿಯಾಣದ ಸಚಿವ ಅನಿಲ್ ವಿಜ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ 67 ವರ್ಷದ ವಿಜ್​​,  ತಮ್ಮ ಸಂಪರ್ಕದಲ್ಲಿದ್ದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗದ ವೇಳೆ ವಿಜ್ ಲಸಿಕೆ ಹಾಕಿಸಿಕೊಂಡಿದ್ರು. ಜೊತೆಗೆ ಪ್ರಯೋಗಾರ್ಥವಾಗಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಹರಿಯಾಣದ ಮೊದಲ ಸ್ವಯಂಸೇವಕ ನಾನೇ ಅಂತ ಹೇಳಿಕೊಂಡಿದ್ರು. ಆದ್ರೆ ಇದೀಗ ಅವರಿಗೂ ಸೋಂಕು ತಗುಲಿದೆ.

ಕೊರೋನಾ ಲಸಿಕೆ 2 ಡೋಸ್ ಹಾಕಿಸಿಕೊಳ್ಳಬೇಕು. ಅವರಿಗೆ ಒಂದು ಡೋಸ್ ಮಾತ್ರ ಹಾಕಲಾಗಿತ್ತು. 2ನೇ ಡೋಸ್ ಹಾಕುವ ಮುನ್ನವೇ ಅವರಿಗೆ ಕೊರೋನಾ ತಗುಲಿದೆ. ಭಾರತ್ ಬಯೋಟೆಕ್ ಮೊದಲೆರಡು ಹಂತದಲ್ಲಿ 1,000 ಜನರ ಮೇಲೆ ಲಸಿಕೆ ಪ್ರಯೋಗ ಮಾಡಿದೆ. ಇದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಸಹಯೋಗದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

-masthmagaa.com

 

Contact Us for Advertisement

Leave a Reply