ಹರಿಯಾಣದಲ್ಲಿ ಬಿಜೆಪಿಗೆ ಐವರು ಪಕ್ಷೇತರರ ಬೆಂಬಲ..!

ಹರಿಯಾಣದಲ್ಲಿ ಅಧಿಕಾರಕ್ಕೇರಲು ಬಿಜೆಪಿಗೆ 6 ಶಾಸಕರ ಅಗತ್ಯವಿದೆ. ದೆಹಲಿಯ ಹರಿಯಾಣ ಭವನ ತಲುಪಿರುವ ಮನೋಹರ್ ಲಾಲ್ ಕಟ್ಟರ್​​ ಐವರು ಪಕ್ಷೇತರ ಶಾಸಕರನ್ನು ಭೇಟಿಯಾಗಿದ್ದಾರೆ. ಜೊತೆಗೆ ಈ ಐವರೂ ಶಾಸಕರು ಬಿಜೆಪಿಗೆ ಬೆಂಬಲ ನೀಡು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಈ ಐವರು ಶಾಸಕರು ನಿನ್ನೆ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ, ಹರಿಯಾಣ ಬಿಜೆಪಿಯ ಉಸ್ತುವಾರಿ ಅನಿಲ್ ಜೈನ್​ರನ್ನು ಕೂಡ ಭೇಟಿಯಾಗಿದ್ದರು ಎನ್ನಲಾಗಿದೆ. ಈ ಐವರು ಪಕ್ಷೇತರರ ಬಲದೊಂದಿಗೆ ಬಿಜೆಪಿ ಬಲ 45ಕ್ಕೆ ಏರಿಕೆಯಾಗಲಿದ್ದು, ಇನ್ನು ಒಂದೇ ಒಂದು ಸಂಖ್ಯೆ ಕಡಿಮೆಯಾಗಲಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಮನೋಹರ್ ಲಾಲ್ ಕಟ್ಟರ್​​, ನಾವು ಸರ್ಕಾರ ರಚಿಸೋದು ಪಕ್ಕಾ ಎಂದು ಹೇಳಿದ್ಧಾರೆ.

ಹರಿಯಾಣದಲ್ಲಿ ಮತದಾರ ಅತಂತ್ರ ಫಲಿತಾಂಶ ನೀಡಿದ್ದಾನೆ. ಒಟ್ಟು 90 ಕ್ಷೇತ್ರಗಳಿರುವ ಇಲ್ಲಿ ಬಹುಮತಕ್ಕೆ 46 ಕ್ಷೇತ್ರಗಳು ಅಗತ್ಯ. ಆದ್ರೆ ಇಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 11, ಐನ್​​ಎಲ್​​ಡಿ 1, ಇತರೆ 8 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದ್ದಾರೆ. ಹೀಗಾಗಿ ಯಾರೂ ಸಹ ಸ್ವತಂತ್ರವಾಗಿ ಸರ್ಕಾರ ನಡೆಸುವ ಸ್ಥಾನಗಳನ್ನು ಪಡೆದಿಲ್ಲ.

 

Contact Us for Advertisement

Leave a Reply