masthmagaa.com:

ಭಾರತದಲ್ಲಿ ಕೊರೋನಾ ಲಸಿಕೆ ಫ್ರೀನಾ ಅಥವಾ ದುಡ್ಡು ಕೊಟ್ಟು ಅದನ್ನ ಹಾಕಿಸಿಕೊಳ್ಳಬೇಕಾ ಅನ್ನೋ ಗೊಂದಲ ಎಲ್ಲರಿಗೂ ಇದೆ. ಆದ್ರೆ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವ 1 ಕೋಟಿ ಹೆಲ್ತ್ ವರ್ಕರ್ಸ್ ಮತ್ತು 2 ಕೋಟಿ ಫ್ರಂಟ್​ಲೈನ್​ ವರ್ಕರ್ಸ್​ಗೆ ಫ್ರಿಯಾಗಿ ಲಸಿಕೆ ಹಾಕಲಾಗುತ್ತೆ ಅಂತ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಸ್ಪಷ್ಟಪಡಿಸಿದ್ದಾರೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ಒಟ್ಟು 30 ಕೋಟಿ ಜನರಿಗೆ 2021ರ ಜುಲೈ ವೇಳೆಗೆ ಲಸಿಕೆ ಹಾಕಬೇಕು ಅಂತ ಪ್ಲಾನ್ ಮಾಡಿದೆ. ಇದರಲ್ಲಿ ಕೊರೋನಾ ವಾರಿಯರ್ಸ್​, ವೃದ್ಧರು, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಇದ್ದಾರೆ. 1 ಕೋಟಿ ಹೆಲ್ತ್ ವರ್ಕರ್ಸ್ ಮತ್ತು 2 ಕೋಟಿ ಫ್ರಂಟ್​ಲೈನ್​ ವರ್ಕರ್ಸ್ ಬಿಟ್ಟು ಉಳಿದಿರುವ 27 ಕೋಟಿ ಜನರಿಗೆ ಹೇಗೆ ಲಸಿಕೆ ಹಾಕಬೇಕು ಅನ್ನೋ ಬಗ್ಗೆ ಚರ್ಚೆ ನಡೀತಿದೆ. ಶೀಘ್ರದಲ್ಲೇ ಅದರ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಹರ್ಷವರ್ಧನ್ ಹೇಳಿದ್ದಾರೆ.

ಕೊರೋನಾ ಲಸಿಕೆ ಬಗ್ಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಇತ್ತೀಚೆಗೆ ಪ್ರಧಾನಿ ಮೋದಿ ಮಾತನಾಡುವಾಗ ಲಸಿಕೆಯ ಬೆಲೆ ಬಗ್ಗೆಯೂ ಮಾತನಾಡಿದ್ರು. ಭಾರತದಲ್ಲಿ ಕೊರೋನಾ ಲಸಿಕೆಯ ರೇಟನ್ನು ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತೆ ಅಂತ ಪ್ರಧಾನಿ ಹೇಳಿದ್ರು. ಈ ಮೂಲಕ ದೇಶದ 135 ಕೋಟಿ ಜನರಿಗೂ ಲಸಿಕೆ ಫ್ರಿಯಾಗಿ ಇರಲ್ಲ ಅನ್ನೋ ಬಗ್ಗೆ ಸುಳಿವು ಕೊಟ್ಟಿದ್ರು. ಇದೀಗ ಡಾ. ಹರ್ಷವರ್ಧನ್ ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಕೊರೋನಾ ವಾರಿಯರ್ಸ್​ಗೆ ಲಸಿಕೆ ಉಚಿತ. ಬೇರೆಯವರಿಗೆ ಫ್ರೀಯಾಗಿ ಕೊಡ್ಬೇಕಾ ಅಥವಾ ರೇಟ್ ಫಿಕ್ಸ್ ಮಾಡ್ಬೇಕಾ ಅನ್ನೋ ಬಗ್ಗೆ ಚರ್ಚೆ ನಡೀತಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply