ನಂದಿನಿ ಹಾಲಿನ ಮೇಲೂ ಹಿಂದಿ ಹೇರಿಕೆ! ವ್ಯಾಪಕ ಆಕ್ರೋಶ

masthmagaa.com:

ಹಿಂದಿ ಹೇರಿಕೆ ವಿವಾದ ಈಗ ನಂದಿನಿ ಪ್ಯಾಕೆಟ್‌ ಮೇಲೆ ಬಂದು ನಿಂತಿದೆ. ನಮ್ಮ ರಾಜ್ಯದ ಹೆಮ್ಮೆಯ ಹಾಗೂ ದೇಶದ ಎರಡನೇ ಅತೀ ದೊಡ್ಡ ಹಾಲು ಓಕ್ಕೂಟ ಸಂಘ ಕೆಎಂಎಫ್ ತಯಾರಿಸುವ ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಕನ್ನಡ ಅಕ್ಷರಗಳು ಕೆಲವು ದಿನಗಳಿಂದ ಮಾಯವಾಗಿವೆ. ಆ ಜಾಗದಲ್ಲಿ ಹಿಂದಿ ಬಂದು ಕೂತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಾಭಿಮಾನಿಗಳು ಕೋಪ ವ್ಯಕ್ತ ಪಡಿಸುತ್ತಿದ್ದಾರೆ. ನಂದಿನಿ ಕರ್ನಾಟಕದ್ದು ಅಂತಾ ಕೆಎಮ್ಎಫ್ ಗೆ ನೆನಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಅಮಿತ್ ಶಾ, ಬೇರೆ ರಾಜ್ಯದವರೊಂದಿಗೆ ಇಂಗ್ಲಿಷ್‌ ಬದಲು ಹಿಂದಿ ಮಾತನಾಡಿ ಅಂತ ಕರೆ ಕೊಟ್ಟಿದ್ದು ಕೂಡಾ ವಿವಾದ ಆಗಿತ್ತು.

-masthmagaa.com

Contact Us for Advertisement

Leave a Reply