ಬಾಂಗ್ಲಾದಲ್ಲಿ ಹಿಂದೂಗಳ ವಿರುದ್ಧ ಹಿಂಸೆ ಹಿಂದೆ ಪಾಕ್ ಕೈವಾಡ!

masthmagaa.com:

ಕಾಶ್ಮೀರದಲ್ಲಿ ಉಗ್ರರಿಗೆ ಕುಮ್ಮಕ್ಕು ನೀಡಿ ಶಾಂತಿ ಹಾಳು ಮಾಡಿದ್ದು ಸಾಲದು ಅಂತ ಬೇರೆ ಮುಸ್ಲಿಂ ರಾಷ್ಟ್ರಗಳಲ್ಲೂ ಅಲ್ಪಸಂಖ್ಯಾತರ ಶಾಂತಿ ಕೆಡಿಸಲು ಮುಂದಾಗಿದೆ ಪಾಕಿಸ್ತಾನ. ಅದಕ್ಕೆ ಲೇಟೆಸ್ಟ್ ಸಾಕ್ಷಿ ಅಂದ್ರೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ.. ಕಳೆದ ಬುಧವಾರ ದುರ್ಗಿ ಮೂರ್ತಿಯ ಕಾಲ ಬಳಿ ಖುರಾನ್ ಇಟ್ಟಿರೋ ವಿಡಿಯೋವೊಂದು ವೈರಲ್ ಆದ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಲವಾರು ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈವರೆಗೆ 6 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದ್ರೆ ಇವೆಲ್ಲವನ್ನು ಪ್ಲಾನ್ ಮಾಡ್ಕೊಂಡೇ ಮಾಡಲಾಗಿದೆ. ಅದ್ರ ಹಿಂದಿರೋ ಮೂಲಭೂತವಾದಿಗಳು ಪಾಕಿಸ್ತಾನದ ಜೊತೆಗೆ ಸಂಪರ್ಕ ಹೊಂದಿರೋ ಸಾಧ್ಯತೆ ಇದೆ. ಯಾಕಂದ್ರೆ ಇತ್ತೀಚೆಗೆ ದೇಗುಲ ಧ್ವಂಸಗಳ ಹಿಂದೆ ಪಾಕಿಸ್ತಾನದ ಜಮಾತ್ ಇ ಇಸ್ಲಾಮಿ ಸಂಘಟನೆ ಕೈವಾಡ ಇದೆ ಅನ್ನೋ ಆರೋಪ ಕೇಳಿ ಬಂದಿತ್ತು. ನಿನ್ನೆ ಪ್ರತಿಕ್ರಿಯಿಸಿದ್ದ ಬಾಂಗ್ಲಾದೇಶ ಗೃಹಸಚಿವ ಅಸಾದುಜ್ಜಮನ್​ ಖಾನ್​, ಈ ಹಿಂಸಾಚಾರ ಫುಲ್ ಪೂರ್ವ ನಿಯೋಜಿತ. ಫುಲ್ ಪ್ಲಾನ್ ಮಾಡಿಕೊಂಡೇ ಮಾಡಲಾಗಿದೆ ಅಂತ ಹೇಳಿದ್ರು. ಇವೆಲ್ಲವನ್ನೂ ನೋಡ್ತಿದ್ರೆ ಇದ್ರ ಹಿಂದೆ ಪಾಕ್ ಕೈವಾಡ ಇರೋದು ಬಲವಾಗ್ತಿದೆ.

ಎಲ್ಲಾ ದೇಶಗಳಲ್ಲಿ ಒಂದಲ್ಲಾ ಒಂದು ಶಕ್ತಿ ಇರುತ್ತೆ.. ಆರ್ಥಿಕ ಶಕ್ತಿ, ಸೇನಾ ಶಕ್ತಿ, ನೈಸರ್ಗಿಕ ಸಂಪನ್ಮೂಲ ಹೀಗೆ.. ಆದ್ರೆ ಪಾಕಿಸ್ತಾನದ ಏಕೈಕ ಶಕ್ತಿ, ನೈಸರ್ಗಿಕ ಸಂಪನ್ಮೂಲ ಅಂದ್ರೆ ಅದು ಭಯೋತ್ಪಾದನೆ. ಈ ಮೂಲಕವೇ ಪಾಕಿಸ್ತಾನ ಬೇರೆ ದೇಶಗಳಲ್ಲಿ ಅಶಾಂತಿ, ದಾಳಿ, ಪರೋಕ್ಷ ಯುದ್ಧಗಳನ್ನು ಮಾಡ್ಕೊಂಡೇ ಬಂದಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಪಾಕಿಸ್ತಾನ ಮತ್ತು ಬಾಂಗ್ಲಾ ಒಂದೇ ಆಗಿತ್ತು. ಆದ್ರೆ 1971ರಲ್ಲಿ ಬಾಂಗ್ಲಾದೇಶ ಸ್ವತಂತ್ರಗೊಳ್ತು. ಅದ್ರಲ್ಲಿ ಭಾರತ ಮಹತ್ವದ ಪಾತ್ರವನ್ನು ವಹಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧ ತುಂಬಾ ಚೆನ್ನಾಗಿದೆ. ಇದನ್ನು ನೋಡ್ಕೊಂಡು ಪಾಕಿಸ್ತಾನ ಸುಮ್ನೆ ಕೂರುತ್ತಾ..?.. ಅಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿಸಿ, ಧಾರ್ಮಿಕ ಶಾಂತಿಯನ್ನು ಕದಡಲು ಯತ್ನಿಸುತ್ತಿದೆ.

ಇವೆಲ್ಲದ್ರ ನಡುವೆ ಹಿಂದೂಗಳ ಮೇಲಿನ ಹಿಂಸಾಚಾರ ಖಂಡಿಸಿ ಬಾಂಗ್ಲಾದ ಢಾಕಾದಿಂದ ಭಾರತದ ಕೋಲ್ಕತ್ತಾವರೆಗೂ ಪ್ರತಿಭಟನೆ ಜೋರಾಗಿದೆ. ಈ ನಡುವೆ ಹಿಂಸಾಚಾರವನ್ನು ಅಮೆರಿಕ ಖಂಡಿಸಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ನಂಬಿಕೆ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು. ಪ್ರಪಂಚದಾದ್ಯಂತ ಪ್ರತಿಯೊಬ್ಬ ವ್ಯಕ್ತಿ ಸುರಕ್ಷಿತವಾಗಿ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಅವಕಾಶ ಸಿಗಬೇಕು ಅಂತ ಅಮೆರಿಕದ ಸ್ಟೇಟ್​​​ ಡಿಪಾರ್ಟ್​​ಮೆಂಟ್ ಹೇಳಿಕೆ ಬಿಡುಗಡೆ ಮಾಡಿದೆ.

ವಿಶ್ವಸಂಸ್ಥೆ ಕೂಡ ಹಿಂಸಾಚಾರ ಖಂಡಿಸಿದ್ದು, ಈ ರೀತಿ ಹಿಂದೂ ಸಮುದಾಯದ ಮೇಲಿನ ದಾಳಿ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ. ಬಾಂಗ್ಲಾದೇಶ ಸರ್ಕಾರ ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಅಂತ ಆಗ್ರಹಿಸಿದೆ.

-masthmagaa.com

Contact Us for Advertisement

Leave a Reply