ಪಾಕ್​​ನಲ್ಲಿ 1947ರ ಬಳಿಕ ಬಂದ್ ಆಗಿದ್ದ ದೇವಸ್ಥಾನ ಓಪನ್​!

masthmagaa.com:

1947ರಲ್ಲಿ ಭಾರತ- ಪಾಕಿಸ್ತಾನ ವಿಭಜನೆಯಾದ ಬಳಿಕ ಬಂದ್ ಆಗಿದ್ದ ದೇವಸ್ಥಾನವನ್ನು ಮತ್ತೆ ತೆರೆಯಲಾಗಿದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರೋ ಪುರಾನಾ ಕಿಲಾ ಮಾತಾ ಮಂದಿರವನ್ನು 74 ವರ್ಷಗಳ ಕಾಲ ಬಂದ್ ಮಾಡಲಾಗಿತ್ತು. ಆದ್ರೆ ಇತ್ತೀಚೆಗೆ ETPB ಅಂದ್ರೆ Evacuee Trust Property Board ಮಂದಿರವನ್ನು ಆಕ್ರಮಿಸಿಕೊಂಡಿದ್ದವರನ್ನು ಸ್ಥಳಾಂತರಿಸಿತ್ತು.

ಆಮೇಲೆ ದೇವಸ್ಥಾನವನ್ನು ರಿಪೇರಿ ಮಾಡಿ, ಸ್ಥಳೀಯ ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿತ್ತು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿರುವ ಹೊತ್ತಲ್ಲೇ ಈ ಬೆಳವಣಿಗೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಮೆಚ್ಚುಗೆಗೆ ಪಾತ್ರವಾಗಿದೆ. ರಾವಲ್ಪಿಂಡಿಯಲ್ಲಿ 1800 ಮಂದಿ ಹಿಂದೂಗಳಿದ್ದಾರೆ. ಈ ಹಿಂದೆ ಇಲ್ಲಿ ಬಂದ್ ಆಗಿದ್ದ ಕೃಷ್ಣನ ದೇವಸ್ಥಾನವನ್ನು ಕಂಪ್ಲೀಟಾಗಿ ನಾಶ ಮಾಡೋಕೆ ಕೆಲ ಇಸ್ಲಾಂ ಮೂಲಭೂತವಾದಿಗಳು ಪ್ರಯತ್ನಿಸಿದ್ರು. ಆದ್ರೆ ಸ್ಥಳೀಯ ಆಡಳಿತ ದೇಗುಲವನ್ನು ವಶಕ್ಕೆ ಪಡೆದು ನವೀಕರಣಗೊಳಿಸಿ, ಪೂಜೆಗೆ ಬಿಟ್ಟುಕೊಟ್ಟಿತ್ತು.

-masthmagaa.com

Contact Us for Advertisement

Leave a Reply