ಜ್ಯೂ.NTR ಜೊತೆ ಕೆಲಸ ಮಾಡೋದಕ್ಕೆ ಇಷ್ಟ ಎಂದ ಹಾಲಿವುಡ್‌ ಟಾಪ್‌ ನಿರ್ದೇಶಕ!

masthmagaa.com:

ಆರ್‌ ಆರ್‌ ಆರ್‌ ಸಿನಿಮಾವನ್ನ ಹಾಡಿಹೊಗಳಿದ ಹಾಲಿವುಡ್‌ ಡೈರೆಕ್ಟರ್‌ಗಳಲ್ಲಿ ಜೇಮ್ಸ್ ಗನ್‌ ಕೂಡ ಒಬ್ಬರು. ಸಂದರ್ಶನವೊಂದರಲ್ಲಿ ಮಾತನಾಡಿದ ಜೇಮ್ಸ್‌ ಗನ್‌ ಆರ್‌ಆರ್‌ಆರ್‌ ಖ್ಯಾತಿಯ ಜ್ಯೂನಿಯರ್‌ ಎನ್‌ಟಿಆರ್‌ ಅವರ ಜೊತೆ ಕೆಲಸ ಮಾಡೋಕೆ ಇಷ್ಟ ಅಂತ ಹೇಳಿದ್ದಾರೆ.

ಕಳೆದ ವರ್ಷ, ರಾಮ್ ಚರಣ್ ಮತ್ತು ಜ್ಯೂನಿಯರ್‌ ಎನ್‌ಟಿಆರ್ ನಟಿಸಿದ ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ಎರಡನೇ ಬಾರಿ ಯುಎಸ್‌ನ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿತ್ತು. ಹಲವಾರು ಚಲನಚಿತ್ರ ನಿರ್ಮಾಪಕರಿಂದ ಶಭಾಷ್‌ ಎನಿಕೊಂಡಿತ್ತು. 2022ರಲ್ಲಿ ಜೇಮ್ಸ್‌ ಗನ್‌ ಅವರಿಗೆ ಭಾರತೀಯ ಅಭಿಮಾನಿಗಳು ಸಿನಿಮಾ ನೋಡುವಂತೆ ಹೇಳಿದ್ರು. ಆರ್‌ಆರ್‌ಆರ್‌ ಸಿನಿಮಾ ನೋಡಿದೀನಿ ಅಂತ ಟ್ವೀಟ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಆರ್‌ಆರ್‌ಆರ್‌ ಸಿನಿಮಾದಲ್ಲಿ ನಿಮಗೆ ಯಾರಿಷ್ಟ ? ಅಂತ ಕೇಳಿದ ನಿರೂಪಕರ ಪ್ರಶ್ನೆಗೆ ಉತ್ತರಿಸಿದ ಜೇಮ್ಸ್‌ ಗನ್‌ “ಜ್ಯೂನಿಯರ್‌ ಎನ್‌ಟಿಆರ್‌ ಅವರ ನಟನೆ ನನಗೆ ತುಂಬಾ ಇಷ್ಟ ಆಯಿತು. ಅವರ ಜೊತೆ ಕೆಲಸ ಮಾಡಬೇಕು ಅಂತ ಆ ಸಿನಿಮಾ ನೋಡಿದ ಮೇಲೆ ಡಿಸೈಡ್‌ ಮಾಡ್ದೆ” ಅಂತ ಹೇಳಿದ್ದಾರೆ. ಜ್ಯೂನಿಯರ್‌ ಎನ್‌ಟಿಆರ್‌ಗೋಸ್ಕರ ಯಾವುದಾದರೂ ಪಾತ್ರವನ್ನ ತಲೇಲಿ ಇಟ್ಕೊಂಡಿದೀರಾ ಅಂತ ಕೇಳಿದ 2ನೇ ಪ್ರಶ್ನೆಗೆ “ಅದ್ಕೆ ತುಂಬಾ ಯೋಚನೆ ಮಾಡಬೇಕು. ಸದ್ಯ ಯೋಚನೆ ಮಾಡ್ಲಿಲ್ಲ. ಸ್ವಲ್ಪ ಟೈಮ್‌ ಬೇಕು” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply