ಚೀನಾದ ಕಾಟಕ್ಕೆ ಪಯಣ ಮುಗಿಸಿದ ಪ್ರಸಿದ್ಧ ಪ್ರಜಾಪ್ರಭುತ್ವ ಪರ ಪತ್ರಿಕೆ

masthmagaa.com:

ಹಾಂಗ್​ಕಾಂಗ್​ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರನ್ನ ನಿಗ್ರಹಿಸೋ ಕೆಲಸ ಚೀನಾ ಜೋರಾಗೇ ಮಾಡ್ತಿದೆ. ಇದರ ಭಾಗವಾಗಿ ಹಾಂಗ್​ಕಾಂಗ್​ನ ಪ್ರಸಿದ್ಧ ಪ್ರಜಾಪ್ರಭುತ್ವ ಪರ ನ್ಯೂಸ್​​ಪೇಪರ್ ಆಗಿದ್ದ ಆಪಲ್ ಡೈಲಿ ಬಾಗಿಲು ಮುಚ್ಚುವಂತಾಗಿದೆ. ಇವತ್ತು ಈ ನ್ಯೂಸ್​ಪೇಪರ್​ನ ಕೊನೇ ಆವೃತ್ತಿ ಪ್ರಕಟವಾಗಿದೆ. ಪತ್ರಿಕೆಯ ಲಾಸ್ಟ್ ಎಡಿಷನ್ ಅನ್ನ ಖರೀದಿಸಲು ಜನ ನಾಮುಂದು ತಾಮುಂದು ಅಂತ ರಾತ್ರೋರಾತ್ರಿ ಮುಗಿಬಿದ್ರು. ಪತ್ರಿಕೆ ಬಗ್ಗೆಗಿನ ತಮ್ಮ ಎಮೋಷನ್ ಅನ್ನ ಹೊರಹಾಕಿದ್ರು. ಸಾಮಾನ್ಯವಾಗಿ ಈ ಪತ್ರಿಕೆಯ 1 ಲಕ್ಷ ಕಾಪಿಗಳು ಪ್ರಕಟವಾಗ್ತಿತ್ತು. ಆದ್ರೆ ಕೊನೇ ಆವೃತ್ತಿಯನ್ನ 10 ಲಕ್ಷ ಕಾಪಿ ಪ್ರಿಂಟ್ ಮಾಡಲಾಗಿದೆ. ಕೊನೇ ಆವೃತ್ತಿಯಲ್ಲಿ ಪ್ರಜಾಪ್ರಭುತ್ವ ಪರ ವಿಚಾರಗಳು, ಸೆಲೆಬ್ರಿಟಿ ಗಾಸಿಪ್ ಮತ್ತು ಅಧಿಕಾರದಲ್ಲಿರೋರ ತನಿಖೆ ಮುಂತಾದ ವಿಚಾರಗಳನ್ನ ಪ್ರಕಟಿಸಲಾಗಿದೆ. ಅಂದ್ಹಾಗೆ ಈ ಪತ್ರಿಕೆಯನ್ನ 1995ರಲ್ಲಿ ಜಿಮ್ಮಿ ಲೈ ಪ್ರಾರಂಭಿಸಿದ್ದರು. ಆದ್ರೆ 2020ರಲ್ಲಿ ಚೀನಾ ಜಾರಿಗೆ ತಂದ ಹಾಂಗ್​​ಕಾಂಗ್​ ನ್ಯಾಷನಲ್ ಸೆಕ್ಯೂರಿಟಿ ಲಾ ಅಡಿಯಲ್ಲಿ ಜಿಮ್ಮಿ ಲೈ ಅವರನ್ನ ಅರೆಸ್ಟ್ ಮಾಡಲಾಗಿತ್ತು. ಇನ್ನೂ ಅವರು ಜೈಲಿನಲ್ಲೇ ಇದ್ದಾರೆ. ಅವರಿಗೆ ಬೇಲ್ ಕೂಡ ಸಿಗ್ತಿಲ್ಲ. ಕಳೆದ ವಾರವಷ್ಟೇ ಆಪಲ್​ ಡೈಲಿಯ ಕೇಂದ್ರ ಕಚೇರಿ ಮೇಲೆ ಸುಮಾರು 500ಕ್ಕೂ ಹೆಚ್ಚು ಪೊಲೀಸರು ರೇಡ್ ಮಾಡಿದ್ದರು. ಈ ವೇಳೆ ಇಬ್ಬರು ಮುಖ್ಯ ಸಂಪಾದಕರು ಸೇರಿದಂತೆ ಹಲವರನ್ನ ಅರೆಸ್ಟ್ ಮಾಡಲಾಗಿತ್ತು. ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದ ಆರೋಪ ಇವರ ಮೇಲೆ ಹೊರಿಸಲಾಗಿತ್ತು. ಇನ್ನು ಆಪಲ್ ಡೈಲಿಗೆ ಸೇರಿದ ಆಸ್ತಿಪಾಸ್ತಿಗಳನ್ನ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಹಾಂಗ್​ಕಾಂಗ್​ನಲ್ಲಿ ಕಳೆದ 26 ವರ್ಷಗಳಿಂದ ಪ್ರಜಾಪ್ರಭುತ್ವ ಪರ ಹೋರಾಟ ಮಾಡ್ತಾ ಬರ್ತಿದ್ದ ಆಪಲ್ ಡೈಲಿ ಸ್ಥಗಿತಗೊಂಡಿದೆ. ಕಳೆದ 26 ವರ್ಷಗಳಿಂದ ಇದನ್ನ ಓದಿಕೊಂಡು ಬಂದಿದ್ದವರು ಆಪಲ್​ ಡೈಲಿಗೆ ಕಣ್ಣೀರ ವಿದಾಯ ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆ ಬ್ರಿಟೀಷ್​ ವಸಾಹತು ಆಗಿದ್ದ ಹಾಂಗ್​ಹಾಂಗ್ ಈಗ ಚೀನಾದ ಸ್ಪೆಷಲ್​ ಅಡ್ಮಿನಿಸ್ಟ್ರೇಟಿವ್ ರೀಜನ್ ಆಗಿದೆ. ಹಾಂಗ್​ಕಾಂಗ್ ಗೆ​ ಸೀಮಿತ ಸ್ವಾಯತ್ತತೆ ಕೊಟ್ಟಿರೋ ಚೀನಾ ಅದರ ಮೇಲೆ ಕಂಟ್ರೋಲ್ ಹೊಂದಿದೆ. 180 ದೇಶಗಳ ​ಮಾಧ್ಯಮ ಸ್ವಾತಂತ್ರ್ಯದ ರ್ಯಾಂಕಿಂಗ್​ನಲ್ಲಿ ಹಾಂಗ್​ಕಾಂಗ್​ 80ನೇ ಸ್ಥಾನದಲ್ಲಿದ್ರೆ, ಚೀನಾ ಕೊನೆಯಿಂದ ನಾಲ್ಕನೇ ಸ್ಥಾನವಾದ 177ನೇ ಸ್ಥಾನದಲ್ಲಿದೆ. ಸೋ ಆಪಲ್​ ಡೈಲಿಯಂತಹ ಪತ್ರಿಕೆಗಳನ್ನ ಬಂದ್​ ಮಾಡೋ ಮೂಲಕ ಹಾಂಗ್​ಕಾಂಗ್​ನ ಮಾಧ್ಯಮ ಸ್ವಾತಂತ್ರ್ಯಕ್ಕೆ ಚೀನಾ ಕತ್ತರಿ ಹಾಕ್ತಿದೆ.

-masthmagaa.com

Contact Us for Advertisement

Leave a Reply