ಮೀನುಗಳಿಗೆ ಬಾಯಾರಿಕೆಯಾಗುತ್ತಾ..? ನೀರು ಕುಡಿಯುತ್ತವಾ..? ಉಸಿರಾಡುತ್ತವಾ..?

ಹಾಯ್ ಫ್ರೆಂಡ್ಸ್…

ಮೀನುಗಳು ನೀರಿನೊಳಗಿದ್ದರೂ ಉಸಿರಾಡೋದು ಹೇಗೆ ಗೊತ್ತಾ? ನೀರಿಂದ ಹೊರ ಬಂದ ಕೂಡಲೇ ಮೀನುಗಳು ಸಾಯೋದೇಕೆ.? ಅಟ್ ದಿ ಸೇಮ್ ಟೈಮ್ ಮನುಷ್ಯರಿಗೆ ಯಾಕೆ ನೀರೊಳಗೆ ಹೋದ ಕೂಡಲೇ ಉಸಿರುಗಟ್ಟೆ ಜೀವ ಹೋಗುತ್ತೆ.? ಮೀನುಗಳು ನೀರೊಳಗೆ ಇದ್ದರೂ ನಮ್ಮ ಥರ ಆಕ್ಸಿಜನ್ ಅಥವಾ ಆಮ್ಲಜನಕವನ್ನೇ ಉಸಿರಾಡೋದು ಹೇಗೆ ಗೊತ್ತಾ? ನೀರಿನ ಒಳಗೆ ಮೀನುಗಳಿಗೆ ಗಾಳಿ ಸಿಗೋದಾದ್ರೂ ಎಲ್ಲಿಂದ..? ಅದೆಲ್ಲ ಬಿಡಿ… ಈ ಮೀನುಗಳು ನೀರ್ ಕುಡೀತಾವಾ? ಮೀನುಗಳಿಗೆ ನಮ್ ಥರಾ ಬಾಯಾರಿಕೆ ಆಗುತ್ತಾ? ಈ ಪ್ರಶ್ನೆಗಳು ಒಂದಕ್ಕಿಂತ ಒಂದು ರೋಚಕವಾಗಿವೆ ಅಲ್ವಾ? ಬನ್ನಿ ಈ ರೋಚಕ ಕುತೂಹಲಕಾರಿ ಪ್ರಕೃತಿಯ ರಹಸ್ಯಗಳನ್ನ ನಾವೀಗ ನಿಮಗೆ ಸಿಂಪಲ್ ಆಗಿ ಅರ್ಥ ಮಾಡಿಸ್ತಾ ಹೋಗ್ತಿವಿ…

ಸ್ನೇಹಿತರೇ, ನಮಗೆ ಎದೆಯೊಳಗೆ ಶ್ವಾಸಕೋಶ, ಲಂಗ್ಸ್ ಇದೆ. ಗಾಳಿ ಎಳೆದುಕೊಳ್ಳೋಕೆ ಮೂಗಿದೆ, ಬಾಯಿ ಮೂಲಕಾನೂ ಎಳಕೋಬೊದು… ನಾವು ಮೂಗು ಬಾಯಿಂದ ಎಳೆದುಕೊಡ ಗಾಳಿಯನ್ನ ನಮ್ಮ ಶ್ವಾಸಕೋಶ ತಗೊಳ್ಳುತ್ತೆ. ಗಾಳಿಯಿಂದ ಅಕ್ಸಿಜನ್ನನ್ನ ತಗೊಂಡು ರಕ್ತಕ್ಕೆ ಸೇರಿಸುತ್ತೆ. ಹಾಗೇ ಇಂಗಾಲದ ಡೈ ಆಕ್ಸೈಡ್ ಅಥವಾ ಕಾರ್ಬನ್ ಡೈಯಾಕ್ಸೈಡನ್ನ ವಾಪಸ್ ಹೊರ ಬಿಡುತ್ತೆ. ಇದನ್ನ ನಾವು ಉಸಿರಾಡೋದು ಅಂತೀವಿ. ಆದ್ರೆ ಮೀನುಗಳದ್ದು ಕಂಪ್ಲೀಟ್ ಡಿಫರೆಂಟ್ ಸ್ಟೊರಿ…

ಮೀನುಗಳಿಗೆ ಶ್ವಾಸಕೋಶವೇ ಇಲ್ಲ!
ಹೌದು ಫ್ರೆಂಡ್ಸ್… ಇದನ್ನ ವಿವರಿಸ್ತೀವಿ ನೊಡಿ… ನೀರಲ್ಲಿ ಆಕ್ಸಿಜನ್ ಮಿಕ್ಸ್ ಆಗಿರುತ್ತೆ. ಆದ್ರೆ ನಿರಲ್ಲಿ ಮಿಕ್ಸ್ ಆಗಿರೋದ್ರಿಂದ ಅದನ್ನ ಡೈರೆಕ್ಟಾಗಿ ಉಸಿರಾಡೋಕೆ ಆಗೋದಿಲ್ಲ. ಹೀಗಾಗಿ ಮೀನುಗಳ ದೇಹ ಡಿಫ್ರೆಂಟಾಗಿ ರಚನೆಯಾಗಿದೆ. ಮೀನುಗಳು ಬಾಯಲ್ಲಿ ನೀರನ್ನ ನುಂಗುತ್ತವೆ. ಆಗ ಅದರ ಬಾಯಿಗಿಂತ ಚೂರೇ ಚೂರು ಒಳಗೆ, ಕಿವಿ ರೀತಿ ಕಾಣೋ ಅಂಗ ಇದೆ. ಅದನ್ನ ಇಂಗ್ಲಿಷ್ ನಲ್ಲಿ ಗಿಲ್ಸ್ ಅಂತಾರೆ. ಕನ್ನಡದಲ್ಲಿ ಕಿವಿರು ಅಂತೀವಿ. ಇದು ಮೀನು ನುಂಗೋ ನೀರಿಂದಾನೇ ಆಕ್ಸಿಜನ್ ತೆಗೆಯುತ್ತೆ. ಅದನ್ನ ಮೀನಿನ ದೇಹಕ್ಕೆ ಸಪ್ಲೈ ಮಾಡುತ್ತೆ. ನಂತರ ಆ ನೀರನ್ನ ಮತ್ತು ಕಾರ್ಬನ್ ಡೈ ಆಕ್ಸೈಡನ್ನ ಕಿವಿರು ಅಥವಾ ಈ ಗಿಲ್ಸ್ ಮೂಲಕ ಹೊರ ಹಾಕುತ್ತೆ. ಈ ಗಿಲ್ಸ್ ನೀರಿನಿಂದ ಹೊರ ಬಂದರೆ ಕೆಲಸ ಮಾಡೋದಿಲ್ಲ. ಯಾಕಂದ್ರೆ ನಮ್ಮ ಶ್ವಾಸಕೋಶಕ್ಕೆ ಹೇಗೆ ನೀರಿನಿಂದ ಆಕ್ಸಿಜನ್ ತೆಗೆಯೋದು ಗೊತ್ತಿಲ್ವೋ ಅದೇ ಥರಾ ಮೀನಿನ ಕಿವಿರಿಗೂ ಅಷ್ಟೇ… ನೇರವಾಗಿ ಗಾಳಿ ಎಳೆದುಕೊಂಡು ಆಕ್ಸಿಜನ್ ತೆಗೆಯೋದು ಗೊತ್ತಿಲ್ಲ…

ಮೀನುಗಳು ನೀರ್ ಕುಡೀತಾವಾ?
ಫ್ರೆಂಡ್ಸ್ ,ಈ ಮೀನುಗಳು ನಮ್ಮ ಥರ ನೀರು ಕುಡಿಯಲ್ಲ. ಯಾಕಂದ್ರೆ ಅವುಗಳಿಗೆ ನಮ್ಮ ಥರ ಬಾಯಾರಿಕೇನೇ ಆಗೋದಿಲ್ಲ. ಅದಕ್ಕೆ ಕಾರಣ ಒನ್ಸ್ ಅಗೇನ್ ಈ ಗಿಲ್ಸ್ ಅಥವಾ ಕಿವಿರು. ಈ ಕಿವಿರು ಬರೀ ಮೀನುಗಳಿಗೆ ಉಸಿರಾಡೋದಕ್ಕೆ ಮಾತ್ರ ಅಲ್ಲ. ನೀರನ್ನ ದೇಹದೊಳಗೆ ಅಬ್ಸಾರ್ಬ್ ಮಾಡಿಕೊಳ್ಳೊದಕ್ಕೂ ಸಹಾಯ ಮಾಡುತ್ತೆ. ಹೌದು.. ಅಬ್ಸಾರ್ಬ್ ಮಾಡ್ಕೊಳ್ಳೋದು… ಮೀನುಗಳು ಬಾಯಿಂದ ನೀರ್ ಕುಡಿಯಲ್ಲ. ಬದಲಾಗಿ ಈ ಗಿಲ್ಸ್ ಮೂಲಕ ದೇಹದ ಒಳಗೆ ನೀರನ್ನ ಅಗತ್ಯಕ್ಕೆ ತಕ್ಕಂತೆ ಎಳ್ಕೊಳ್ಳುತ್ತೆ. ಈ ಸ್ಪಾಂಜ್ ನೀರನ್ನ ಎಳ್ಕೊಳ್ಳುತ್ತಲ್ಲಾ? ಆ ಥರಾ ಎಳ್ಕೊಳ್ಳುತ್ತೆ. ಹೀಗಾಗಿ ಮೀನಿಗೆ ಯಾವಾಗ್ಲೂ ಬಾಯಾರಿಕೆ ಆಗೋದೆ ಇಲ್ಲ. ಯಾವಾಗ್ಲೂ ಮೀನಿನ ದೇಹದಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರಿನಂಶ ಇದ್ದೇ ಇರುತ್ತೆ. ಇನ್ನು ಸಮುದ್ರದ ಮೀನುಗಳ ಕಿವಿರಿಗೆ ಎಕ್ಸ್​ಟ್ರಾ ಪವರ್ ಇರುತ್ತೆ. ಅದೇನು ಅಂದ್ರೆ ಸಮುದ್ರದ ಉಪ್ಪು ನೀರನ್ನ ಫಿಲ್ಟರ್ ಮಾಡಿ ಒಳಗೆ ಹಿರಿಕೊಳ್ಳೊ ಶಕ್ತಿ… ಅಬ್ಬಾ.. ಈ ಪ್ರಕೃತಿಯಲ್ಲಿ ಎಂತೆಂಥಾ ವಿಚಿತ್ರಗಳಿವೆ ಅಲ್ವಾ..?

ಫ್ರೆಂಡ್ಸ್… ಇದು ಮೀನು ಉಸಿರಾಡೋದು ಹೇಗೆ, ಮೀನಿಗೆ ಬಾಯಾರಿಕೆ ಆಗಿ ಅದು ನೀರು ಕುಡಿಯುತ್ತಾ ಅನ್ನೋದರ ಹಿಂದಿನ ಸೈನ್ಸ್… ಇದನ್ನ ಸರಳವಾಗಿ ವಿವರಿಸೋ ಪ್ರಯತ್ನ ಮಾಡಿದ್ದೇವೆ. ನಿಮಗಿದು ಇಷ್ಟ ಆಗಿದ್ದರೆ ಲೈಕ್ ಮಾಡಿ.. ಎಲ್ಲರಿಗೂ ಶೇರ್ ಮಾಡಿ. ಎಸ್ಪೆಷಲಿ ಮೀನು ತಿನ್ನೋ ನಿಮ್ಮ ಫ್ಫ್ರೆಂಡ್ಸ್‌ಗೆ ಶೇರ್ ಮಾಡಿ…

Contact Us for Advertisement

Leave a Reply