ಯುಕ್ರೇನ್‌ನ ಮಾರಿಯೋ ಪೋಲ್‌ನಲ್ಲಿ ಮಾರಣ ಹೋಮ!

masthmagaa.com:

ರಷ್ಯಾದಿಂದ ಅತ್ಯಂತ ಭೀಕರ ರೀತಿಯಲ್ಲಿ ದಾಳಿಗೆ ಒಳಗಾದ ಮಾರಿಯೋ ಪೋಲ್‌ನಲ್ಲಿ 1,170 ನಾಗರೀಕರು ಮೃತಪಟ್ಟಿದ್ದು, ಇದರಲ್ಲಿ 47 ಜನರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಅಂತ ನಗರದ ಉಪ ಮೇಯರ್‌ ಸೆರ್ಹಿ ಓರ್ಲೋವ್ ಹೇಳಿದ್ದಾರೆ. ಇನ್ನು ಇಲ್ಲಿಯ ಜನರು ನೀರು, ಶಾಖ, ವಿದ್ಯುತ್‌, ಗ್ಯಾಸ್‌ ಇಲ್ಲದೆ ಪರದಾಡ್ತಿದ್ದಾರೆ. ಕುಡಿಯಲು ಸರಿಯಾಗಿ ನೀರು ಸಿಗದೆ ಹಿಮವನ್ನ ಕರಗಿಸ್ತಿದ್ದಾರೆ ಅಂತಲೂ ಉಪಮೇಯರ್‌ ಹೇಳಿದ್ದಾರೆ. ಮತ್ತೊಂದ್ಕಡೆ ರಷ್ಯಾ ಶೆಲ್ ದಾಳಿ ಮುಂದುವರಿಸಿದ್ದು ಮರಿಯೋಪೋಲ್‌ನ 4 ಲಕ್ಷ ನಾಗರಿಕರನ್ನ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ಇಲ್ಲಿನ ಸುಮಾರು 3 ಸಾವಿರ ನವಜಾತ ಶಿಶುಗಳಿಗೆ ಔಷಧ ಮತ್ತು ಆಹಾರದ ಕೊರತೆ ಇದೆ ಅಂತ ಕೂಡ ಯುಕ್ರೇನಿನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply