ಪ್ರೇಮಿ ಜೊತೆ ಸಿಕ್ಕಿಬಿದ್ದಳು ಪತ್ನಿ..! ಗಂಡ ಮಾಡಿದ್ದೇನು..?

ಸಹೋದರ ಸಂಬಂಧಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನರೌರಾ ಪ್ರದೇಶದಲ್ಲಿ ರಾಜೇಶ್ ಕುರೀಲ್ ಎಂಬಾತನಿಗೆ ತನ್ನ ಪತ್ನಿ ಸುನಿತ ಮತ್ತು ತನ್ನ ಸೋದರ ಸಂಬಂಧಿ ಮನೀಶ್ ಜೊತೆ ಅಕ್ರಮ ಸಂಬಂಧ ಇದೆ ಅನ್ನೋದು ಗೊತ್ತಾಗಿತ್ತು. ಆದ್ರೆ ಯಾವುದೇ ಸಾಕ್ಷಿ ಇರಲಿಲ್ಲ. ಇದೇ ವಿಚಾರವಾಗಿ ಜಗಳವಾಗಿ, ಮನೀಶ್‍ನನ್ನು ಮನೆಯಿಂದ ಕಳುಹಿಸಲಾಗಿತ್ತು. ಆದ್ರೆ ನಂತರದಲ್ಲಿ ಪುನಃ ಮನೀಶ್ ಅದೇ ಮನೆಗೆ ಬರಬೇಕಾಯ್ತು.

ಅದೇ ರೀತಿ ಇತ್ತೀಚೆಗೆ ಒಂದಿನ ರಾತ್ರಿ ಎಲ್ಲರೂ ಖುಷಿಯಲ್ಲಿ ಊಟ ಮಾಡಿ ಮಲಗಿದ್ದರು. ಆದ್ರೆ ಪತಿ ರಾಜೇಶ್‍ಗೆ ಪತ್ನಿಯ ಮೇಲಿನ ಶಂಕೆಯಿಂದಾಗಿ ನಿದ್ದೆಯೇ ಬಂದಿರಲಿಲ್ಲ. ಅತ್ತ ಪತ್ನಿ ಸುನಿತ ಮತ್ತು ಮನೀಶ್ ಕೂಡ ಎಲ್ಲರೂ ನಿದ್ದೆ ಮಾಡೋದನ್ನ ಕಾಯ್ತಿದ್ರು. ಮಧ್ಯರಾತ್ರಿಯಾದ ಬಳಿಕ ಎಲ್ಲರೂ ನಿದ್ದೆ ಮಾಡಿದ್ದಾರೆ ಎಂದು ಭಾವಿಸಿದ ಸುನಿತ ಮತ್ತು ಮನೀಶ್ ಇಬ್ಬರೂ ಕೋಣೆಗೆ ಹೋಗಿದ್ದಾರೆ. ಆದ್ರೆ ಸ್ವಲ್ಪ ಹೊತ್ತು ಬಿಟ್ಟು ಎದ್ದು ಹೋದ ಪತಿ ಕೋಣೆಗೆ ನುಗ್ಗಿದ್ದಾರೆ. ಅಲ್ಲದೆ ಅಲ್ಲಿ ಸರಸದಲ್ಲಿ ತೊಡಗಿದ್ದ ತನ್ನ ಪತ್ನಿ ಸುನಿತಾ ಮತ್ತು ಸಂಬಂಧಿ ಮನೀಶ್‍ನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆಗೈದಿದ್ದಾರೆ. ನಂತರ ಸ್ವತಃ ರಾಜೇಶ್ ನರೌರಾ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

Contact Us for Advertisement

Leave a Reply