ತನ್ನ ಪ್ರಿಯಕರನ ಜೊತೆ ಮಗಳ ಮದುವೆ ಮಾಡಿಸಿದ ತಾಯಿ..!

masthmagaa.com

ಹೈದ್ರಾಬಾದ್​: ಪಾಪಿ ತಾಯಿಯೊಬ್ಬಳು ಅಮ್ಮ ಅನ್ನೋ ಪದಕ್ಕೇ ಕಳಂಕ ತರೋ ಕೆಲಸ ಮಾಡಿದ್ದಾಳೆ. ಅನಿತಾ ಎಂಬ ಮಹಿಳೆ 1 ವರ್ಷದ ಹಿಂದೆ ತನ್ನ ಪತಿಯಿಂದ ದೂರವಾಗಿದ್ದಳು. ನಂತರದಲ್ಲಿ ನವೀನ್ ಕುಮಾರ್ ಎಂಬಾತನೊಂದಿಗೆ ಆಕೆಯ ಅನೈತಿಕ ಸಂಬಂಧ ಶುರುವಾಗಿತ್ತು. ಆಕೆಗೆ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳೂ ಇದ್ದರು.

ಆದ್ರೆ ತನ್ನ ಅನೈತಿಕ ಸಂಬಂಧವನ್ನು ಮುಂದುವರಿಸಲು ಕಾಲೇಜಿನಲ್ಲಿ ಓದುತ್ತಿದ್ದ ತನ್ನ ದೊಡ್ಡ ಮಗಳನ್ನು ತನ್ನ ಪ್ರಿಯಕರ ನವೀನ್ ಕುಮಾರ್​​ಗೆ ಕೊಟ್ಟು ಮದುವೆ ಮಾಡಿದ್ದಾಳೆ. ನಂತರವೂ ತನ್ನ ಅನೈತಿಕ ಸಂಬಂಧ ಬಿಡದ ಅನಿತಾ, ಮಗಳ ಪತಿಯಾಗಿದ್ದ ನವೀನ್ ಜೊತೆ ಸಂಬಂಧ ಮುಂದುವರಿಸಿದ್ದಾಳೆ. ಆದ್ರೆ ಇತ್ತೀಚೆಗೆ  ಯುವತಿಗೆ ತನ್ನ ತಾಯಿ ಮತ್ತು ಪತಿಯ  ಅನೈತಿಕ ಸಂಬಂಧದ ಬಗ್ಗೆ ಗೊತ್ತಾಗಿದೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆಯನ್ನೂ ಒಡ್ಡಿದ್ದಳು.

ಆದ್ರೆ ಅನಿತಾ ಮತ್ತು ನವೀನ್ ಈ ಬೆದರಿಕೆಗೆ ಕ್ಯಾರೆ ಎನ್ನಲಿಲ್ಲ. ಹೀಗಾಗಿ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ಯುವತಿಯ ತಂಗಿ ಅಂದ್ರೆ ಅನಿತಾಳ 2ನೇ ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎಲ್ಲವನ್ನೂ ಬಯಲು ಮಾಡಿದ್ದಾಳೆ. ಹೀಗಾಗಿ ಅನಿತಾ ಮತ್ತು ನವೀನ್ ಕುಮಾರ್​ರನ್ನು ಬಂಧಿಸಿರುವ ಪೊಲೀಸರು ಕೇಸ್ ದಾಖಲಿಸಿದ್ದಾರೆ.

masthmagaa.com

Contact Us for Advertisement

Leave a Reply