ಪತ್ನಿ, ಮಕ್ಕಳಿಗೆ ವಿಷವಿಟ್ಟು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ..!

ಹೈದ್ರಾಬಾದ್: ಸಾಫ್ಟ್​ವೇರ್ ಇಂಜಿನಿಯರ್ ಒಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿದ್ಧಾನೆ. ಹೈದರಾಬಾದ್​​ನಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ. 40 ವರ್ಷದ ಪ್ರದೀಪ್​​​ ಸಾಫ್ಟ್​ವೇರ್ ಸಂಸ್ಥೆಯೊಂದನ್ನು ಲೀಡ್​​ ಮಾಡುತ್ತಿದ್ದರು. ಆದ್ರೆ ಈಗ ತಮ್ಮ 35 ವರ್ಷದ ಪತ್ನಿ ಸ್ವಾತಿ, 6 ಮತ್ತು 2 ವರ್ಷದ ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸು ಸ್ಥಿತಿ ಚೆನ್ನಾಗಿ ಇಲ್ಲದೇ ಇರೋದು ಆತ್ಮಹತ್ಯೆಗೆ ಕಾರಣ ಅಂತ ಶಂಕಿಸಲಾಗಿದೆ. ಪ್ರದೀಪ್ ಊಟದಲ್ಲಿ ವಿಷ ಬೆರೆಸಿ ಪತ್ನಿ- ಮಕ್ಕಳನ್ನು ಕೊಂದು, ಬಳಿಕ ತಾನೂ ಅದೇ ವಿಷ ಸೇವಿಸಿ ಜೀವ ಬಿಟ್ಟಿದ್ದಾರೆ.

Contact Us for Advertisement

Leave a Reply