ಸಂಪುಟ ವಿಸ್ತರಣೆ: ಬೀದಿಗೆ ಬಂತು ಬಿಜೆಪಿಯ ಒಳಜಗಳ!

masthmagaa.com:

ರಾಜ್ಯ ಸಚಿವ ಸಂಪುಟ ವಿಸ್ತರಣೆ ಗರಿಗೆದರಿದ್ದು ಸಿಎಂ ಬಸವರಾಜ್ ಬೊಮ್ಮಾಯಿ ಸೋಮವಾರ ದೆಹಲಿಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಪಕ್ಷದ ವರಿಷ್ಠ ನಾಯಕರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸೋ ಸಾಧ್ಯತೆ ಇದೆ. ಇದ್ರ ನಡುವೆಯೇ ಸಚಿವಾಕಾಂಕ್ಷಿಗಳು ಕೂಡ ದೆಹಲಿಗೆ ಹಾರಲು ಸಿದ್ಧತೆ ಮಾಡ್ಕೊಳ್ತಿದ್ದಾರೆ. ಜೊತೆಗೆ ಬಿಜೆಪಿ ಪಾಳಯದಲ್ಲಿ ಪರಸ್ಪರ ಕಚ್ಚಾಟ ಶುರುವಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಶಾಸಕ ಸೋಮಶೇಖರ ರೆಡ್ಡಿ, ನಾನು ಐದೈದು ಬಾರಿ ಆರೋಗ್ಯ ಸಚಿವ ಡಾ. ಸುಧಾಕರ್​​ಗೆ ಕರೆ ಮಾಡಿದ್ದೆ. ಆದ್ರೆ ಅವರು ನನ್ನ ಕರೆ ರಿಸೀವ್ ಮಾಡೇ ಇಲ್ಲ. ಮೆಸೇಜ್ ಮಾಡಿದ್ರೂ ರಿಪ್ಲೇ ಮಾಡ್ಲಿಲ್ಲ. ನಮ್ಮ ಸರ್ಕಾರದಲ್ಲಿ ಕೆಲ ಸಚಿವರು ಆಕಾಶದಿಂದ ಬಿದ್ದಂಗೆ ಆಡ್ತಿದ್ದಾರೆ. ಅವರಿಗೆ ಸಿಎಂ ಬುದ್ಧಿ ಹೇಳಬೇಕು ಅಂತ ಹೇಳಿದ್ದಾರೆ.

ಇನ್ನು ರೇಣುಕಾಚಾರ್ಯ ಕೂಡ ಸ್ವಪಕ್ಷೀಯರ ವಿರುದ್ಧ ಕಿಡಿಕಾರಿದ್ದಾರೆ. ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದ್ಧಾರೆ. ನಾನು ರೆಡಿಮೇಡ್ ಫುಡ್ ಅಲ್ಲ. ಹೋರಾಟ ಮಾಡಿನೇ ನಾನು ಶಾಸಕನಾಗಿದ್ದು.. ಬಹಿರಂಗ ಹೇಳಿಕೆ ಬೇಡ ಅಂತ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚಿಸಿದ್ದಾರೆ. ಹೀಗಾಗಿ ನಾನೇ ದೆಹಲಿಗೆ ಹೋಗ್ತೀನಿ ಅಂ ತ ಹೇಳಿದ್ಧಾರೆ.

ಮತ್ತೊಂದ್ಕಡೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಸಿಎಂ ಬಸವರಾಜ್ ಬೊಮ್ಮಾಯಿ 6 ತಿಂಗಳು ಮಾತ್ರ ಸಿಎಂ ಆಗಿ ಇರ್ತಾರೆ ಅಂತ ಹೇಳಿದ್ದಾರೆ. ಸಿಎಂ ಮಾಡುವಾಗಲೇ ನಿಮ್ ಅವಧಿ 6 ತಿಂಗಳು ಮಾತ್ರ ಅಂತ ಹೇಳಲಾಗಿತ್ತು. ಈಗ ಅವಧಿ ಮುಗಿದಿದೆ. ಈ ಸಲನೂ ಬಿಜೆಪಿ ಸರ್ಕಾರದಲ್ಲಿ ಮೂರು ಸಿಎಂ ಫಿಕ್ಸ್ ಅಂತ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply