“50 ಜನರ ಮುಂದೆ ನನಗೆ ಬೈದಿದ್ರು” : ಕೃತಿ ಸನೋನ್‌ !

masthmagaa.com:

ಬಾಲಿವುಡ್‌ನ ಟಾಪ್‌ ಹೀರೋಯಿನ್‌ಗಲಲ್ಲಿ ಒಬ್ಬರಾದ ಕೃತಿ ಸನೋನ್‌ ತಮ್ಮ ಸಿನಿ ಕೆರಿಯರ್‌ ಶುರುವಾಗೋದಕ್ಕಿಂತ ಮೊದಲು ನಡೆದ ಒಂದು ಕಹಿ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕೃತಿ ಮೊದಲು ಬಿಟೆಕ್‌ ಸ್ಟುಡೆಂಟ್‌ ಆಗಿದ್ರು. ನಂತರ ಮಾಡೆಲಿಂಗ್‌ ಶುರು ಮಾಡಿದ್ದ ಇವರು ರ್ಯಾಂಪ್‌ ವಾಕ್‌ ಮಾಡುವಾಗ ಮಿಸ್ಟೇಕ್‌ ಆಯ್ತು ಅಂತ ಕೊರಿಯೋಗ್ರಾಫರ್‌ 50 ಜನರ ಮುಂದೆ ಬೈದಿದ್ದನ್ನ ನೆನಪು ಮಾಡಿಕೊಂಡ್ರು. “ನನಗೆ ಅದು ಮೊದಲ ರ್ಯಾಂಪ್‌ ವಾಕ್‌ ಆಗಿತ್ತು, ನಾನು ತುಂಬಾನೇ ನರ್ವಸ್‌ ಆಗಿದ್ದೆ. ಹಾಗಾಗಿ ಮಿಸ್ಟೇಕ್‌ ಆಯ್ತು. ಕೊರಿಯೋಗ್ರಾಫರ್‌ ತುಂಬಾನೇ ರೂಡ್‌ ಇದ್ರು. 50 ಜನರ ಮುಂದೆ ನನಗೆ ಸಿಕ್ಕಾಪಟ್ಟೆ ಬೈದು ಬಿಟ್ರು, ಅಲ್ಲಿಂದ ಅಳು ಕಂಟ್ರೋಲ್‌ ಮಾಡಿಕೊಂಡು ಆಟೋದಲ್ಲಿ ಬಂದು ಕೂತು ತುಂಬಾನೇ ಅತ್ತಿದೀನಿ. ಆ ದಿನವನ್ನ ನಾನು ಯಾವತ್ತೂ ಮರೆಯೋದಿಲ್ಲ” ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply