ನಾನು ಹಾಲಿವುಡ್‌ಗೆಲ್ಲಾ ಹೋಗಲ್ಲ, ನಮ್ಮ ಚಿತ್ರರಂಗವೇ ಬೆಸ್ಟ್‌ : ಶಾಹಿದ್‌ ಕಪೂರ್‌ !

masthmagaa.com:

ನಟ ಶಾಹಿದ್‌ ಕಪೂರ್‌ ಬಾಲಿವುಡ್‌ನ ಫೇಮಸ್‌ ನಟರಲ್ಲಿ ಒಬ್ಬರು. ಇತ್ತಿಚೀಗೆ ನಡೆದ ಸಂದರ್ಶನದಲ್ಲಿ ಶಾಹಿದ್‌ ಕಪೂರ್‌ ಅವರಿಗೆ ಹಾಲಿವುಡ್‌ ಸಿನಿಮಾಗಳನ್ನ ಯಾವಾಗ ಮಾಡ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಶಾಹಿದ್‌ ಕಪೂರ್‌ ಉತ್ತರಕೊಟ್ಟಿದ್ದಾರೆ.

“ನಾನು ಬಾಲಿವುಡ್‌ ಇಂಡಸ್ಟ್ರಿಯಲ್ಲಿ 20 ವರ್ಷದಿಂದ ಕೆಲಸ ಮಾಡ್ತಾ ಇದೀನಿ. ನಾನು ಈ ಇಂಡಸ್ಟ್ರಿಯನ್ನ ಇಷ್ಟ ಪಡ್ತೀನಿ, ನನ್ನ ಸಿನಿಮಾಗಳನ್ನ ಪ್ರೀತಿಸ್ತೀನಿ. ನಾನು ಇಲ್ಲಿ ಒಳ್ಳೆಯ ಕೆಲಸ ಮಾಡೋಕೆ ಅಂತ ಬಂದಿದೀನಿ, ಇದೇ ಇಂಡಸ್ಟ್ರಿಯಲ್ಲಿ ನಾನು ಆರಾಮಾಗಿ ಇದೀನಿ. ನೀವು ಹಾಲಿವುಡ್‌ ಅಂತ ಹೇಳ್ತಾ ಇದೀರಾ ಆದ್ರೆ ನಾನು ರಿವರ್ಸ್‌ ಬೇಕಿದ್ರೂ ಹೋಗ್ತೀನಿ. ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಮಾಡಿದ್ರೆ, ಆ ಪಾತ್ರ ನನಗೆ ಇಷ್ಟ ಆದ್ರೆ ನಾನು ನಟಿಸೋಕೆ ಒಪ್ಪಿಕೋಳ್ತೇನೆ. ಹಾಲಿವುಡ್‌ ಸಣ್ಣ ಪುಟ್ಟ ಪಾತ್ರಗಳಿಗೋಸ್ಕರ ಹೋಗೋದಕ್ಕಿಂತ ಇದೇ ಇಂಡಸ್ಟ್ರಿಗಳಲ್ಲೇ ಕೆಲಸ ಮಾಡೋದು ಉತ್ತಮ. ನಾನು ಈಗಷ್ಟೇ OTT ಗಳಲ್ಲೂ ಕೆಲಸ ಮಾಡಿದ್ದೀನಿ, ಹಾಗಾಗಿ ಬೇರೆ ಯಾವುದೇ ಭಾಷೆಗೆ ಹೋಗೋದಕ್ಖೂ ನನಗೆ ಕಷ್ಟ ಅಲ್ಲ. ನೀವು ಏನಾದರೂ ಸಾಧನೆ ಮಾಡಬೇಕು ಅಂತ ಹೊರಟಾಗ ಭಾಷೆ ನಿಮಗೆ ಅಡ್ಡಿ ಆಗಬಾರದು. ನನಗೆ ಅವಕಾಶ ಸಿಕ್ಕರೆ ಯಾವ ಭಾಷೆ ಆದ್ರೂ ಕೆಲಸ ಮಾಡೋಕೆ ನಾನು ರೆಡಿ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply