ಅಂತಾರಾಷ್ಟ್ರೀಯ ಅಟಾಮಿಕ್ ಎನರ್ಜಿ ಏಜೆನ್ಸಿ ಮುಖ್ಯಸ್ಥ ಇರಾನ್ ಪ್ರವಾಸ!

masthmagaa.com:

ಅಂತಾರಾಷ್ಟ್ರೀಯ ಅಟಾಮಿಕ್ ಎನರ್ಜಿ ಏಜೆನ್ಸಿಯ ಮುಖ್ಯಸ್ಥ ರಾಫೇಲ್ ಗ್ರೋಸ್ಸಿ ಇರಾನ್​​​ಗೆ ಭೇಟಿ ನೀಡ್ತಿದ್ದಾರೆ. ಮುಂದಿನ ಸೋಮವಾರ ಅಂದ್ರೆ ನವೆಂಬರ್ 22ರಂದು ಈ ಪ್ರವಾಸ ಕೈಗೊಳ್ಳಲಿದ್ದು, ಇರಾನ್​ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಜೊತೆಗೆ ಇರಾನ್ ವಿದೇಶಾಂಗ ಸಚಿವ ಹೊಸ್ಸೇನ್ ಆಮಿರ್ ಅಬ್ದುಲ್ಲಾಹಿಯಾನ್ ಮತ್ತು ಇರಾನ್ ಅಟಾಮಿಕ್ ಏಜೆನ್ಸಿಯ ಮುಖ್ಯಸ್ಥ ಮೊಹ್ಮದ್ ಇಸ್ಲಾಮಿಯನ್ನು ಕೂಡ ಭೇಟಿಯಾಗಲಿದ್ದಾರೆ. ಅಂದಹಾಗೆ ಗ್ರೋಸ್ಸಿ ಕಳೆದ ಸೆಪ್ಟೆಂಬರ್​​ನಲ್ಲೂ ಇರಾನ್​​ಗೆ ಭೇಟಿ ನೀಡಿ, ಮೊಹ್ಮದ್ ಇಸ್ಲಅಮಿ ಜೊತೆ ಚರ್ಚೆ ನಡೆಸಿದ್ರು. ಇದೀಗ ಇರಾನ್ ಆಹ್ವಾನದ ಮೇರೆಗೆ ಮತ್ತೆ ಪ್ರವಾಸ ಕೈಗೊಳ್ತಿದ್ದಾರೆ. ಇದ್ರ ನಡುವೆ ಬಿಡುಗಡೆಯಾದ ಅಂತಾರಾಷ್ಟ್ರೀಯ ಅಟಾಮಿಕ್ ಎಜರ್ನಿ ಏಜೆನ್ಸಿಯ ಹೊಸ ವರದಿಯಲ್ಲಿ ಇರಾನ್​​ ಯುರೇನಿಯಂ ಸಂಗ್ರಹವನ್ನು ಹೆಚ್ಚಿಸಿದೆ ಅಂತ ಮಾಹಿತಿ ನೀಡಲಾಗಿದೆ. 2015ರಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಇರಾನ್ ಮುರಿದಿದೆ. ಕಳೆದ ನವೆಂಬರ್ 6ರವರೆಗೆ ಇರಾನ್​​ನಲ್ಲಿ 2489.7 ಕೆಜಿಯಷ್ಟು ಯುರೇನಿಯಂ ಸಂಗ್ರಹವಾಗಿದೆ ಅಂತ ವರದಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply