ಟಿ-20 ವಿಶ್ವಕಪ್​​ಗೆ ವೇಳಾಪಟ್ಟು ಬಿಡುಗಡೆ ಮಾಡಿದ ಐಸಿಸಿ!

masthmagaa.com:

ಟಿ-20 ವಿಶ್ವಕಪ್​ನ ವೇಳಾಪಟ್ಟಿಯನ್ನ ಐಸಿಸಿ ಇವತ್ತು ಬಿಡುಗಡೆ ಮಾಡಿದೆ. ಸೂಪರ್​ 12ನ ಗ್ರೂಪ್​ 2ರಲ್ಲಿರೋ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 24ನೇ ತಾರೀಖು ಮುಖಾಮುಖಿಯಾಗಲಿವೆ. ಭಾರತದ ಮುಂದಿನ ಪಂದ್ಯ ಅಕ್ಟೋಬರ್ 31ಕ್ಕೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಮೂರನೇ ಮ್ಯಾಚ್​ ನವೆಂಬರ್​ 3ಕ್ಕೆ ಅಫ್ಘನಿಸ್ತಾನ ವಿರುದ್ಧ ನಡೆಯುತ್ತೆ. ದುಬೈ ಮತ್ತು ಅಬುದಾಬಿಯಲ್ಲಿ ಈ ಪಂದ್ಯಗಳು ನಡೆಯಲಿವೆ. ಟಿ-20 ವಿಶ್ವಕಪ್​ನ ಮೊದಲ ಆವೃತ್ತಿಯನ್ನ 2007ರಲ್ಲಿ ಭಾರತ ಧೋನಿ ನಾಯಕತ್ವದಲ್ಲಿ ಗೆದ್ದಿತ್ತು. ಇನ್ನು ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳು ಷರಿಯಾ ಕಾನೂನುಗಳನ್ನ ಜಾರಿಗೆ ತಂದ್ರೆ ಅಫ್ಘನಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಕಥೆ ಏನು ಅನ್ನೋ ಬಗ್ಗೆ ಐಸಿಸಿ ತಲೆ ಕೆಡಿಸಿಕೊಂಡಿದೆ.

-masthmagaa.com

Contact Us for Advertisement

Leave a Reply