ಎಲ್ಲರೂ ಹಿಂದಿ ಮಾತಾಡಿ ಎಂದ ಅಮಿತ್ ಶಾ: ಭಾರಿ ವಿರೋಧ!

masthmagaa.com:

ಇವತ್ತು ಹಿಂದಿ ದಿವಸ್.. ಹೀಗಾಗಿ ದೆಹಲಿಯ ಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹಸಚಿವ ಅಮಿತ್ ಶಾ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಮಾತನಾಡ್ತಾರೆ ಅಂತಾದ್ರೆ ನಮಗೆ ಹಿಂದಿ ಮಾತಾಡೋಕೆ ಮುಜುಗರ ಯಾಕೆ ಅಂತ ಪ್ರಶ್ನಿಸಿದ್ರು. ಆತ್ಮನಿರ್ಭರ್ ಅಂದ್ರೆ ಬರೀ ದೇಶದಲ್ಲಿ ಉತ್ಪಾದನೆ ಮಾಡೋದು ಮಾತ್ರವಲ್ಲ.. ನಾವು ಭಾಷೆಯ ವಿಚಾರದಲ್ಲೂ ಆತ್ಮನಿರ್ಭರ್ ಆಗೋ ಅಗತ್ಯತೆ ಇದೆ. ಹೀಗಾಗಿ ದೇಶದ ಜನ ತಮ್ಮ ಮಾತೃಭಾಷೆಯ ಜೊತೆಗೆ ಆಡಳಿತಭಾಷೆ ಹಿಂದಿಯನ್ನು ಕೂಡ ಬಳಸೋಕೆ ಶುರು ಮಾಡಬೇಕು ಅಂತ ಕರೆ ನೀಡಿದ್ದಾರೆ. ಜೊತೆಗೆ 1949ರ ಸೆಪ್ಟೆಂಬರ್ 14ರಂದೇ ಹಿಂದಿಯನ್ನು ಆಡಳಿತ ಭಾಷೆಯಾಗಿ, ದೇವನಗರಿ ಲಿಪಿಯನ್ನು ಆಡಳಿತ ಲಿಪಿಯನ್ನಾಗಿ ಒಪ್ಪಿಕೊಳ್ಳಲಾಗಿತ್ತು ಅಂತ ಕೂಡ ಹೇಳಿದ್ದಾರೆ. ಸರಿ, ನೀವು ನಮ್ಮತ್ರ ಕನ್ನಡದಲ್ಲಿ ಮಾತಾಡಿ ಹಾಗಾದ್ರೆ, ನಾವ್ ಹಿಂದಿಲಿ ಮಾತಾಡ್ತೀವಿ. ಇಡೀ ದೇಶ ಹಿಂದಿ ಮಾತಾಡಬೇಕು ಅಂತ ಯಾರೇ ಒತ್ತಾಯ ಮಾಡಿದ್ರೂ ಅದಕ್ಕೆ ಡೆಫಿನೆಟ್ಲಿ ವಿರೋಧನೆ ವ್ಯಕ್ತ ಆಗೋದು. ಯಾಕೆ ಹಿಂದಿನೇ ಮಾತಾಡ್ಬೇಕು ಸ್ವಾಮಿ? ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ನಿಮ್ಮದೇ ಮಾತೃಭಾಷೆ ಗುಜರಾತಿ ಈ ಭಾಷೆಗಳನ್ನ ಮಾತ್ರ ಆಯಾ ಮಾತೃಭಾಷೆಯ ಜನ ಮಾತಾಡಿದ್ರೆ ಪ್ರಾಬ್ಲಮ್ ಏನು. ಹಿಂದಿ ಇಂಗ್ಲಿಷ್ ಎರಡೂ ಬರದ ಹಳ್ಳಿ ಕನ್ನಡಿಗನಿಗೋ, ತಮಿಳನಿಗೋ, ಗುಜರಾತಿಗೋ ದೇಶ ಪ್ರೇಮ ಇರಲ್ಲ, ದೇಶದ ಐಕ್ಯತೆ ಬಗ್ಗೆ ಆಸೆ ಇರಲ್ಲ ಅಂತಾ ನಿಮಗೆ ಅನಿಸುತ್ತಾ? ನಮ್ಮದಲ್ಲದ ಭಾಷೆಯನ್ನ ನಾವು ಮಾತನಾಡಬೇಕು ಅಂತ ಆಗ್ರಹ, ಒತ್ತಾಯ ಯಾಕೆ? ಉತ್ತರ ಭಾರತ ಮೂಲದ ರಾಜಕಾರಣಿಗಳ ಹಿಂದಿ ಭಾಷಣ ಕೇಳಕೆ ಬಿಟ್ರೆ ನಮಗೆ ಇನ್ಯಾವ ಲಾಭಕ್ಕೆ ಹಿಂದಿ ಬೇಕು? ಹಾಗೆ ನೋಡಿದ್ರೆ ತಮಿಳರಿಗೆ ಹೋಲಿಸಿದ್ರೆ ಆಂಧ್ರ, ಕರ್ನಾಟಕದಲ್ಲಿ ಜನಕ್ಕೆ ಒಂಚೂರು ಹಿಂದಿ ಗೊತ್ತಿದೆ. ಆದ್ರೆ ಹಿಂದಿ ಮಾತಾಡಿ ಹಿಂದಿ ಮಾತಾಡಿ ಅಂದ್ರೆ ಹಿಂದಿ ಬರೋರು ಕೂಡ, ಸಂದರ್ಭ ಬಂದಾಗ ಬಳಸೋರು ಕೂಡ ಇನ್ಮೇಲೆ ಬಳಸಲ್ಲ ಅಂತ ಸಿಟ್ಟು ಮಾಡ್ಕೋಬೋದು. ಯೋಚನೆ ಮಾಡಿ.

-masthmagaa.com

Contact Us for Advertisement

Leave a Reply