ಚೀನಾ ಪರವಾಗಿ ಕೆಲಸ ಮಾಡಿದ್ರಾ ಐಎಂಎಫ್ ಮುಖ್ಯಸ್ಥೆ?

masthmagaa.com:

ಐಎಂಎಫ್​ ಅಂದ್ರೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟೋಲಿನ ಜಿಯೋರ್ಜೀವಾ ವಿರುದ್ಧ ಚೀನಾ ಪರವಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಇವರು ವಿಶ್ವಬ್ಯಾಂಕ್ ಸಿಇಒ ಆಗಿದ್ದಾಗ ಚೀನಾ ಪರವಾಗಿ ದಾಖಲೆಗಳನ್ನು ಬದಲಿಸುವಂತೆ ಒತ್ತಡ ಹೇರಿದ್ದರು ಅಂತ ಆರೋಪ ಕೇಳಿ ಬಂದಿದೆ. ಗುರುವಾರ ಬಿಡುಗಡೆಯಾಗಿರೋ ಸ್ವತಂತ್ರ ವರದಿಯೊಂದರಲ್ಲಿ ವಿಶ್ವಬ್ಯಾಂಕ್ ದಾಖಲೆಗಳಲ್ಲಿ ಬದಲಾವಣೆ ಮಾಡಿರೋದ್ರ ಬಗ್ಗೆ ಉಲ್ಲೇಖಿಸಲಾಗಿದೆ. ಈ ಬಗ್ಗೆ ಐಎಂಎಫ್​​ ಎಕ್ಸಿಕ್ಯುಟಿವ್ ಬೋರ್ಡ್ ಔಪಚಾರಿಕವಾಗಿ ತನಿಖೆ ಕೂಡ ಶುರು ಮಾಡಿದೆ. ಆದ್ರೆ ಈ ಆರೋಪವನ್ನು ಕ್ರಿಸ್ಟೋಲಿನಾ ಜಿಯೋರ್ಜೀವಾ ನಿರಾಕರಿಸಿದ್ದಾರೆ. ಐಎಂಎಫ್​ನ ಸಿಬ್ಬಂದಿಯೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದು ನಿಜವಲ್ಲ. ಈ ಪ್ರಕರಣದಲ್ಲಾಗಲೀ, ಈ ಹಿಂದೆಯಾಗಲೀ ಅಥವಾ ನಂತರವಾಗಲಿ.., ನಾನು ಯಾವತ್ತೂ ಸಿಬ್ಬಂದಿಗೆ ದಾಖಲೆ ಬದಲಿಸುವಂತೆ ಒತ್ತಡ ಹೇರಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply