ಡೈನಾಸರ್‌ಗಳಿಗೂ ಕಾಡಿತ್ತಾ ಶೀತ, ಕೆಮ್ಮು, ಜ್ವರ? ಇದೇ ಅವನತಿಗೆ ಕಾರಣನಾ?

masthmagaa.com:

ಭೂಮಿ ಮೇಲೆ ಸುಮಾರು 15-20 ಕೋಟಿ ವರ್ಷಗಳ ಕಾಲ ಬದುಕಿದ್ದ ಡೈನೋಸಾರ್​ಗಳ ಅವನತಿ ಹೇಗಾಯ್ತು ಅನ್ನೋ ಬಗ್ಗೆ ನಾನಾ ರೀತಿಯ ವಾದಗಳಿವೆ. ಇದೀಗ ಉದ್ದನೆಯ ಕುತ್ತಿಗೆ ಹೊಂದಿರೋ, ಸಸ್ಯ ಭಕ್ಷಕ, ಸಾರೋಪೋಡ್‌ ಪ್ರಜಾತಿಗೆ ಸೇರಿದ ಡೈನೋಸಾರ್​​ಗಳು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲಿರಬಹುದು. ಈ ಶ್ವಾಸಕೋಶ ಸಂಬಂಧಿ ಕಾಯಿಲೆ ಡೈನೋಸಾರ್​ಗಳಲ್ಲಿ ಬೋನ್​ ಇನ್ಫೆಕ್ಷನ್​ಗೆ ದಾರಿ ಮಾಡಿಕೊಟ್ಟಿರಬಹುದು ಅಂತ ಹೊಸ ಅಧ್ಯಯನವೊಂದು ಹೇಳಿದೆ. ಅಮೆರಿಕದ ಮೊಂಟಾನಾ ರಾಜ್ಯದ ಗ್ರೇಟ್​ ಪ್ಲೇನ್ಸ್ ಡೈನೋಸಾರ್ ಮ್ಯೂಸಿಯಂನಲ್ಲಿ ಈ ಅಧ್ಯಯನ ನಡೆದಿದೆ. ಡಾಲಿ (Dolly) ಅನ್ನೋ ಡೈನೋಸಾರ್​ವೊಂದರ ಕುತ್ತಿಗೆ ಭಾಗದ ಮೂಳೆಯನ್ನ ಅಧ್ಯಯನ ನಡೆಸಿದ ವಿಜ್ಞಾನಿಗಳಿಗೆ ಈ ವಿಚಾರಗಳು ಗೊತ್ತಾಗಿದೆ. ಒಂದ್ವೇಳೆ ಇದು ಸರಿಯಾಗಿದ್ದರೆ, ಈ ಡೈನೋಸಾರ್​ಗೆ ನ್ಯುಮೋನಿಯಾ ರೀತಿಯ ಲಕ್ಷಣಗಳಾದ ಕೆಮ್ಮು, ಸೀನು, ಜ್ವರ, ತಲೆನೋವು ಮತ್ತು ತೂಕ ಕಡಿಮೆ ಆಗುವಂಥ ರೋಗ ಲಕ್ಷಣಗಳಿಂದ ಬಳಲಿರಬಹುದು ಅಂತ ವಿಜ್ಞಾನಿಗಳು ಹೇಳಿದ್ದಾರೆ. ಏರ್ಸಾಕ್ಯುಲೈಟಿಸ್ ಎಂದು ಕರೆಯಲ್ಪಡುವ ಈ ರೀತಿಯ ಸೋಂಕು ಇಂದು ಡೈನೋಸಾರ್ ವಂಶಸ್ಥರಾದ ಪಕ್ಷಿಗಳಲ್ಲಿ ತುಂಬಾ ಸಾಮಾನ್ಯವಾಗಿದೆ. 15-20 ವರ್ಷ ವಯಸ್ಸಿನಲ್ಲೇ ಮೃತಪಟ್ಟಿರಬಹುದಾದ ಡಾಲಿ ಡೈನೋಸಾರ್​ ಭೂಮಿಯ ಮೇಲೆ ಜೀವಿಸಿದ್ದ ಬಹುದೊಡ್ಡ ಪ್ರಾಣಿಯಾಗಿದೆ.

-masthmagaa.com

Contact Us for Advertisement

Leave a Reply