ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಚೀನಾ ಬೆಂಬಲ…ಪಾಕಿಸ್ತಾನಕ್ಕೆ ಮುಖಭಂಗ..!

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಬರುವ ಮುನ್ನ ಜಮ್ಮು ಕಾಶ್ಮೀರದ ವಿಚಾರವಾಗಿ ಚೀನಾ ತನ್ನ ನಿಲುವು ಬದಲಿಸಿದೆ. ಕಾಶ್ಮೀರ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ. ಜಮ್ಮು ಕಾಶ್ಮೀರದ ವಿಚಾರವಾಗಿ ಬೆಂಬಲ ಪಡೆಯಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾಗೆ ತೆರಳಿರುವ ಹೊತ್ತಲ್ಲೇ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಹಿಂದೆ ಚೀನಾ ಜಮ್ಮು ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಚರ್ಚಿಸಬೇಕು ಎಂದು ಹೇಳಿತ್ತು. ಜೊತೆಗೆ ಪಾಕ್ ಪರವಾಗಿ ವಿಶ್ವಸಂಸ್ಥೆಯಲ್ಲಿ ವಿಷಯ ಪ್ರಸ್ತಾಪಿಸಿ, ಸಭೆ ಕೂಡ ನಡೆಯುವಂತೆ ಮಾಡಿತ್ತು. ಆದ್ರೀಗ ಚೀನಾ ಉಲ್ಟಾ ಹೊಡದಿರೋದ್ರಿಂದ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಭಾರಿ ಮುಖಭಂಗ ಉಂಟಾಗಿದೆ.

ಇದೇ ಶುಕ್ರವಾರದಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಬರಲಿದ್ದಾರೆ. ಚೆನ್ನೈನಲ್ಲೇ ಒಂದು ದಿನ ಕಳೆಯಲಿದ್ದು, ಪ್ರಧಾನಿ ಮೋದಿ ಜೊತೆ 5 ಗಂಟೆಗೂ ಹೆಚ್ಚು ಕಾಲ ಚರ್ಚಿಸಲಿದ್ದಾರೆ. ಅಲ್ಲದೆ ಹಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಭಾರತ ಸಮರಾಭ್ಯಾಸ ನಡೆಸುತ್ತಿರುವುದರಿಂದ ಇನ್ನೂ ಚೀನಾ ಕ್ಸಿ ಜಿನ್‍ಪಿಂಗ್ ಭಾರತಕ್ಕೆ ಆಗಮಿಸುವ ಬಗ್ಗೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಅಲ್ಲದೆ ಕ್ಸಿ ಜಿನ್ ಪಿಂಗ್ ಭಾರತದ ಬಳಿಕ ನೇಪಾಳಕ್ಕೂ ತೆರಳಲಿದ್ದಾರೆ.

Contact Us for Advertisement

Leave a Reply