ಇಮ್ರಾನ್ ಖಾನ್‍ಗೆ ಕೈಕೊಟ್ಟ ವಿಮಾನ..! ಅಮೆರಿಕಾಗೆ ವಾಪಸ್..!

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದ ಇಮ್ರಾನ್ ಖಾನ್ ವಾಪಸ್ಸಾಗುವಾಗ ಅರ್ಧಕ್ಕೆ ಮತ್ತೆ ಅಮೆರಿಕಾಗೆ ತೆರಳಿದ್ದಾರೆ. ನ್ಯೂಯಾರ್ಕ್‍ನಿಂದ ಹೊರಟ ವಿಮಾನದಲ್ಲಿ ಕೆನಡಾದ ಬಳಿ ಬರೋವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹೀಗಾಗಿ ಕೆನಡಾದ ಟೊರೆಂಟೋದಲ್ಲಿ ವಿಮಾನವನ್ನು ತಿರುಗಿಸಿ ವಾಪಸ್ ನ್ಯೂಯಾರ್ಕ್‍ಗೆ ತೆರಳಲಾಯ್ತು. ಆದ್ರೆ ಯಾವ ರೀತಿಯ ತಾಂತ್ರಿಕ ಸಮಸ್ಯೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ವಿಮಾನ ಸರಿಯಾಗೋವರೆಗೆ ಇಮ್ರಾನ್ ಖಾನ್ ನ್ಯೂಯಾರ್ಕ್‍ನಲ್ಲೇ ಉಳಿಯಲಿದ್ದಾರೆ. ಆದ್ರೆ ವಿಮಾನ ಸಮಸ್ಯೆ ನಿವಾರಣೆಗೆ ಎಷ್ಟು ಸಮಯ ಬೇಕು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಅಮೆರಿಕಾಗೆ ತೆರಳುವಾಗ ಇಮ್ರಾನ್ ಖಾನ್ ತನ್ನ ಫ್ಲೈಟ್‍ನಲ್ಲಿ ತೆರಳಿರಲಿಲ್ಲ. ಸೌದಿಯಲ್ಲಿದ್ದ ಅವರು ಕಮರ್ಷಿಯಲ್ ಫ್ಲೈಟ್‍ನಲ್ಲಿ ಅಮೆರಿಕಾಗೆ ತೆರಳಬೇಕಿತ್ತು. ಆದ್ರೆ ಸೌದಿ ರಾಜಕುಮಾರ ತನ್ನ ವಿಮಾನ ನೀಡಿದ್ದರಿಂದ ಅದರಲ್ಲಿ ಹೋದ್ರು ಅಂತ ತಿಳಿದುಬಂದಿದೆ.

Contact Us for Advertisement

Leave a Reply