ಇಸ್ರೇಲ್​​ಗೆ ಬೆಂಬಲ ಕಡಿಮೆ ಮಾಡ್ತಿದ್ಯಾ ಬೈಡೆನ್ ನೇತೃತ್ವ ಅಮೆರಿಕ!

masthmagaa.com:

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಅಮೆರಿಕದಿಂದ ಇಸ್ರೇಲ್​​ಗೆ ಸಿಗುತ್ತಿದ್ದ ಬೆಂಬಲ ಈಗ ಜೋ ಬೈಡೆನ್ ಆಡಳಿತದಲ್ಲಿ ಕಡಿಮೆಯಾಗ್ತಿದೆ. ಇಸ್ರೇಲ್ ತಾನು ಪ್ಯಾಲೆಸ್ತೇನ್​​ನಿಂದ ಅತಿಕ್ರಮಿಸಿಕೊಂಡಿರೋ ವೆಸ್ಟ್​​ಬ್ಯಾಂಕ್​​ನಲ್ಲಿ ಯಹೂದಿಗಳನ್ನು ನೆಲೆಸೋ ಕಾರ್ಯವನ್ನು ಮಾಡ್ತಾನೇ ಇದೆ. ಹೊಸ ಹೊಸ ಮನೆಗಳನ್ನು ನಿರ್ಮಿಸಿ ಅಲ್ಲಿ ಯಹೂದಿಗಳನ್ನು ನೆಲಯೂರುವಂತೆ ಮಾಡ್ತಿದೆ. ಇದಕ್ಕೆ ಡೊನಾಲ್ಡ್​ ಟ್ರಂಪ್ ಆಡಳಿತ ಫುಲ್ ಸಪೋರ್ಟ್ ಕೊಟ್ಟಿತ್ತು. ಆದ್ರೆ ಜೋ ಬೈಡೆನ್ ಸರ್ಕಾರ ಇಸ್ರೇಲ್​ನ ಈ ಕ್ರಮವನ್ನು ಕಟುವಾಗಿ ಟೀಕಿಸೋಕೆ ಶುರು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕದ ಸ್ಟೇಟ್ ಡಿಪಾರ್ಟ್​​ಮೆಂಟ್ ವಕ್ತಾರ ನೆಡ್​ ಪ್ರೈಸ್​​, ವೆಸ್ಟ್​ ಬ್ಯಾಂಕ್​​ನಲ್ಲಿ ಇಸ್ರೇಲ್​​ ಯಹೂದಿಗಳ ಮರುಸ್ಥಾಪನಾ ಕೆಲಸ ತುಂಬಾ ಆತಂಕಕಾರಿಯಾಗಿದೆ. ನಾವು ಇದನ್ನು ವಿರೋಧಿಸ್ತೀವಿ. ಇದು ಎರಡು ದೇಶಗಳ ಭವಿಷ್ಯವನ್ನು ಹಾನಿಗೊಳಿಸುತ್ತದೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply