ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ!

masthmagaa.com:

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಮ್ಮಿಯಾಗ್ತಿರೋ ನಡುವೆ ಡೆಂಘೀ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗ್ತಿದೆ. ಸೆಪ್ಟೆಂಬರ್​ 1ರಿಂದ ಇಲ್ಲಿವರೆಗೆ ಅಂದ್ರೆ ಬರೀ 17 ದಿನದಲ್ಲಿ 596 ಡೆಂಘೀ ಪ್ರಕರಣ ದೃಢಪಟ್ಟಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು 150 ಪ್ರಕರಣ ವರದಿಯಾಗಿದೆ. ಡೆಂಘೀಯಲ್ಲಿ ಒಟ್ಟು ನಾಲ್ಕು ರೂಪಾಂತರಿಗಳಿವೆ ಡಿ1, ಡಿ2, ಡಿ3 ಮತ್ತು ಡಿ4. ಇದರಲ್ಲಿ ಡಿ2 ರೂಪಾಂತರಿ ಅಪಾಯಕಾರಿ ಎನ್ನಲಾಗುತ್ತೆ. ಈ ಎಲ್ಲಾ ರೂಪಾಂತರಿಗಳು ಕೂಡ ರಾಜ್ಯದ ವಿವಿಧ ಭಾಗಗಳಲ್ಲಿ ದೃಢಪಟ್ಟಿದೆ. ಆದ್ರೆ ಇದುವರೆಗೆ ಒಂದೂ ಸಾವು ಸಂಭವಿಸಿಲ್ಲ. ಇನ್ನು ಈ ವರ್ಷದ ಲೆಕ್ಕ ತಗೊಂಡ್ರೆ ರಾಜ್ಯದಲ್ಲಿ ಇದುವರೆಗೆ, 2,987 ಡಂಘೀ ಪ್ರಕರಣ ವರದಿಯಾಗಿದೆ. ಇದರಲ್ಲಿ ಅತಿಹೆಚ್ಚು 540 ಪ್ರಕರಣ ಬೆಂಗಳೂರಿನಲ್ಲಿ, ಉಡುಪಿಯಲ್ಲಿ 293, ಕಲಬುರಗಿಯಲ್ಲಿ 280, ಶಿವಮೊಗ್ಗದಲ್ಲಿ 226 ಮತ್ತು ದಕ್ಷಿಣ ಕನ್ನಡದಲ್ಲಿ 190 ಪ್ರಕರಣ ದೃಢಪಟ್ಟಿದೆ. 2020ರಲ್ಲಿ ಒಟ್ಟು 4,093 ಕೇಸ್​ ದೃಢಪಟ್ಟಿತ್ತು. 5 ಸಾವು ಸಂಭವಿಸಿತ್ತು. ದಕ್ಷಿಣ ಕನ್ನಡದಲ್ಲಿ 2, ಬೆಂಗಳೂರು, ಧಾರವಾಡ ಮತ್ತು ಹಾವೇರಿಯಲ್ಲಿ ತಲಾ ಒಂದು ಸಾವು ಸಂಭವಿಸಿತ್ತು. ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಮೀರತ್​ನಲ್ಲಿ ಯಾರ್ದಾದ್ರೂ ಮನೆಯಲ್ಲಿ ಸೊಳ್ಳೆ ಲಾರ್ವಾಗಳು ಕಂಡುಬಂದ್ರೆ ಮೊದಲ ಸಲ ಅವರಿಗೆ ನೋಟಿಸ್​ ನೀಡಲಾಗುತ್ತೆ, ಎರಡನೇ ಸಲ ದಂಡ ಹಾಕಲಾಗುತ್ತೆ, ಮೂರನೇ ಸಲ ಅಂಥವರ ಮೇಲೆ ಎಫ್​ಐಆರ್​ ದಾಖಲಿಸಲಾಗುತ್ತೆ ಅಂತ ಅಧಿಕಾರಿಗಳು ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply