ಅಫ್ಘಾನಿಸ್ತಾನದ ಬೇಡಿಕೆಗೆ ಸ್ಪಂದಿಸಿದ ಭಾರತ! ಘರ್ಷಣೆ ಸಂಬಂಧ UNSC ಸ್ಪೆಷಲ್ ಮೀಟಿಂಗ್!

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಫ್ಘಾನಿಸ್ತಾನದ ಆತಂಕಕಾರಿ ಪರಿಸ್ಥಿತಿ ಬಗ್ಗೆ ತುರ್ತು ಸಭೆ ನಡೆಸಬೇಕೆಂದು ಆ ದೇಶ ಮನವಿ ಮಾಡಿಕೊಂಡ ಬೆನ್ನಲ್ಲೇ ಈ ನಿಟ್ಟಿನಲ್ಲಿ ಭಾರತ ತಯಾರಿ ಆರಂಭಿಸಿದೆ. ಸದಸ್ಯ ದೇಶಗಳೊಂದಿಗೆ ಈ ಸಂಬಂಧ ಮಾತುಕತೆ ಶುರು ಮಾಡಿದೆ. ಭಾರತ ಈ ತಿಂಗಳ ಮಟ್ಟಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ / UNSCಯ ಅಧ್ಯಕ್ಷ ಸ್ಥಾನ ಹೊಂದಿದೆ. ಹೀಗಾಗಿ ಅಫ್ಘಾನಿಸ್ತಾನ ಭಾರತಕ್ಕೆ ಮನವಿ ಮಾಡಿತ್ತು.
ಆದ್ರೆ ಇದೇ ತಿಂಗಳ 11ನೇ ತಾರೀಕು ಅಫ್ಘಾನಿಸ್ತಾನ ವಿಚಾರ ಸಂಬಂಧ ಅಮೆರಿಕ, ರಷ್ಯಾ, ಚೀನಾ ಹಾಗೂ ಪಾಕಿಸ್ತಾನ ಕತಾರ್ ನ ದೋಹಾದಲ್ಲಿ ಸಭೆ ನಡೆಸಲಿದ್ದಾರೆ. ರಷ್ಯಾ ನೇತೃತ್ವದ ಈ ಗ್ರೂಪ್‌ನಲ್ಲಿ ಉದ್ದೇಶಪೂರ್ವಕವಾಗಿ ಭಾರತವನ್ನ ಹೊರಗಿಡಲಾಗಿದೆ. ಚನಾ-ಪಾಕಿಸ್ತಾನ ಸೇರಿ ರಷ್ಯಾ ಮೇಲೆ ಒತ್ತಡ ಹೇರಿ ಭಾರತವನ್ನ ಹೊರಗಿಡಲಾಗಿದೆ. ಈ ಬಗ್ಗೆ ಕೇಳಿದ್ರೆ, ‘ತಾಲಿಬಾನಿಗಳ ಮೇಲೆ ಭಾರತಕ್ಕೆ ಯಾವುದೇ ಇನ್ಫ್ಲುಯೆನ್ಸ್ ಇಲ್ಲ. ಸೋ ಭಾರತವನ್ನ ಕರೀಬೇಕಾಗಲ್ಲ’ ಅಂತ ರಷ್ಯಾ ಹೇಳ್ತಾ ಬರ್ತಿದೆ. ಆದ್ರೆ ಭಾರತ ಕಳೆದ ಎರಡು ದಶಕದ ಅವಧಿಯಲ್ಲಿ ಅಫ್ಘಾನಿಸ್ತಾ ಪುನರ್ನಿರ್ಮಾಣಕ್ಕೆ ಅಪಾರ ಪ್ರಮಾಣದ ದುಡ್ಡು ಸುರಿದಿದೆ. ಶ್ರಮಿಸಿದೆ. ಭಾರತದ ಅಫಿಷಿಯಲ್ ಮ್ಯಾಪ್ ಪ್ರಕಾರ ಅಫ್ಘಾನಿಸ್ತಾನದ ಬಾರ್ಡರ್ ಒಂಚೂರು ಭಾರತಕ್ಕೂ ತಾಗುತ್ತೆ. ಹೀಗಾಗಿ ಅಲ್ಲಿ ನಮ್ಮ ಹಿತಾಸಕ್ತಿ ಕೂಡ ಇದೆ ಅನ್ನೋದು ಭಾರತದ ವಾದ.

-masthmagaa.com

Contact Us for Advertisement

Leave a Reply