ಭಾರತ-ಚೀನಾ ಹೊಸ ಹೆಜ್ಜೆ! ಗೋಗ್ರಾದಿಂದ ಸೇನೆ ಹಿಂತೆಗೆತ!

masthmagaa.com:

ಭಾರತ ಮತ್ತು ಚೀನಾ ಇತ್ತೀಚೆಗಷ್ಟೇ ಗೋಗ್ರಾ ಪ್ರದೇಶದಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ಪ್ಲಾನ್ ಮಾಡಿತ್ತು. ಅದರಂತೆ ಆಗಸ್ಟ್​​ 4 ಮತ್ತು 5ರಂದು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಈಗ ಗೋಗ್ರಾದಲ್ಲಿ ಎರಡೂ ಕಡೆಯವರು ತಮ್ಮ ತಮ್ಮ ಶಾಶ್ವತ ನೆಲೆಗಳಿಗೆ ಹೋಗಿದ್ದಾರೆ ಅಂತ ಸೇನೆ ಮಾಹಿತಿ ನೀಡಿದೆ. ಈ ಭಾಗದಲ್ಲಿ ನಿರ್ಮಿಸಲಾಗಿದ್ದ ಎಲ್ಲಾ ರೀತಿಯ ತಾತ್ಮಾಲಿಕ ರಚನೆಗಳನ್ನು, ಮೂಲಭೂತ ಸೌಕರ್ಯಗಳನ್ನು ನಾಶಪಡಿಸಲಾಗಿದೆ. ಈ ಮೂಲಕ ಮತ್ತೊಂದು ಸೂಕ್ಷ್ಮ ಪ್ರದೇಶದ ಸಂಘರ್ಷ ಬಗೆಹರಿದಂತಾಗಿದೆ. ಉಳಿದ ಭಾಗಗಳಾದ ಡೆಪ್ಸಾಂಗ್ ಮತ್ತು ಹಾಟ್​ ಸ್ಪ್ರಿಂಗ್​ ಪ್ರದೇಶದಲ್ಲೂ ಶಾಂತಿಯುತ ಪರಿಹಾರಕ್ಕೆ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದೇವೆ ಅಂತ ಕೂಡ ಸೇನೆ ಮಾಹಿತಿ ನೀಡಿದೆ. ಅಂದಹಾಗೆ ಇತ್ತೀಚೆಗೆ ಎರಡು ದೇಶಗಳ ನಡುವೆ ಕಮಾಂಡರ್ ಹಂತದ ಮಾತುಕತೆ ನಡೆದಿತ್ತು. ಅದ್ರಲ್ಲಿ ಈ ಸೇನೆ ಹಿಂತೆಗೆತದ ನಿರ್ಧಾರ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply