ಯುಕ್ರೇನ್-ರಷ್ಯಾ ಸಂಘರ್ಷ: ಭಾರತಕ್ಕೆ ಅಮೆರಿಕ ನೈಸ್!

masthmagaa.com:

ಯುಕ್ರೇನ್ ಜೊತೆಗಿನ ಸಂಘರ್ಷದಲ್ಲಿ ರಷ್ಯಾಗೆ ಭಾರತ ಪದೇ ಪದೆ ಸಪೋರ್ಟ್ ಮಾಡ್ತಿದ್ದಂತೆ ಅಮೆರಿಕ ಕೂಡ ಭಾರತಕ್ಕೆ ನೈಸ್ ಮಾಡೋದನ್ನ ಹೆಚ್ಚಿಸ್ತಿದೆ. ಭಾರತ ಮತ್ತು ಅಮೆರಿಕ ನಡುವೆ 2 ಪ್ಲಸ್ 2 ಮಾತುಕತೆಗೆ ಮುಹೂರ್ಥ ಫಿಕ್ಸ್ ಆಗಿದೆ.. ಭಾರತ ಮತ್ತು ಅಮೆರಿಕ ರಕ್ಷಣಾ ಸಹಕಾರದಲ್ಲಿ ಇದೊಂದು ಮಹತ್ವದ ಕ್ಷಣವಾಗಿದೆ ಅಂತ ಪೆಂಟಗನ್ ತಿಳಿಸಿದೆ. ಈ ಸಭೆಯಲ್ಲಿ ಉಭಯ ದೇಶಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಭಾಗಿಯಾಗಲಿದ್ದಾರೆ. 2020ರಲ್ಲಿ ಕೊನೆಯದಾಗಿ ಅಮೆರಿಕ ಮತ್ತು ಭಾರತ ನಡುವೆ 2 ಪ್ಲಸ್ 2 ಮಾತುಕತೆ ನಡೆದಿತ್ತು. ಏಪ್ರಿಲ್​ನಲ್ಲಿ ನಡೆಯಲಿರೋ ಈ ದ್ವಿಪಕ್ಷೀಯ ಸಭೆಯನ್ನು ವಾಷಿಂಗ್ಟನ್​ನಲ್ಲೇ ಆಯೋಜಿಸಲಾಗುತ್ತೆ ಅಂತ ಕೂಡ ಪೆಂಟಗನ್ ತಿಳಿಸಿದೆ. ಅಷ್ಟೇ ಅಲ್ಲ.. ಭಾರತ ಮತ್ತು ಅಮೆರಿಕದ ಸಂಬಂಧದಲ್ಲಿ ಹಲವಾರು ಸವಾಲುಗಳಿವೆ. ಆದ್ರೆ ಅವುಗಳನ್ನು ಮ್ಯಾನೇಜ್ ಮಾಡ್ಬೋದು. ಪಾಲುದಾರಿಕೆಯನ್ನ ಹೆಚ್ಚಿಸುವತ್ತ ಮುಂದುವರಿಯಬಹುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply