ಭಾರತ-ಚೀನಾ ಗಡಿಯುದ್ಧಕ್ಕೂ ಸಂಘರ್ಷಕ್ಕೆ ಚೀನಾನೇ ಕಾರಣ: ಅಮೆರಿಕ

masthmagaa.com:

ಭಾರತ-ಚೀನಾ ಗಡಿಯುದ್ಧಕ್ಕೂ ಹಿಮಾಲಯನ್ ರೇಂಜ್‌ನಲ್ಲಿ ಸಂಘರ್ಷಕ್ಕೆ ಕಾರಣ ಆಗುವಂತೆ ವರ್ತನೆ ಮಾಡ್ತಿರೋದು ಚೀನಾನೇ ಅಂತ ಅಮೆರಿಕ ಹೇಳಿದೆ. ಅಮೆರಿಕದ ಟಾಪ್ ಡಿಪ್ಲಾಮ್ಯಾಟ್ ಆಗಿರೋ ನಿಕೋಲಸ್ ಬರ್ನ್ಸ್ ಈ ಹೇಳಿಕೆ ನೀಡಿದ್ದಾರೆ. ಸಧ್ಯ ಇವ್ರು ಸೆನೆಟ್ ಫಾರಿನ್ ರಿಲೇಶನ್ಸ್ ಕಮಿಟಿಯ ಮೆಂಬರ್ ಆಗಿದ್ದಾರೆ. ಮುಂದೆ ಇವರೇ ಚೀನಾಗೆ ಅಮೆರಿಕದ ರಾಯಭಾರಿ ಅಂತ ಬೈಡೆನ್ ಇವರನ್ನ ನಾಮಿನೇಟ್ ಕೂಡ ಮಾಡಿದ್ದಾರೆ. ಸೋ ಅಮೆರಿಕನ್ ಡಿಪ್ಲಾಮ್ಯಾಟಿಕ್ ಎಸ್ಟಾಬ್ಲಿಷ್ಮೆಂಟಲ್ಲಿ ಇಷ್ಟೊಂದು ಇಂಪಾರ್ಟೆಂಟ್ ಆಗಿರೋ ವ್ಯಕ್ತಿನೇ ಚೀನಾ ಮೇಲೆ ಆರೋಪಗಳನ್ನ ಮಾಡಿದ್ದಾರೆ. ಚೀನಾ ಯಾವುದೇ ಅಂತರಾಷ್ಟ್ರೀಯ ಕಾನೂನಿಗೆ ಬೆಲೆ ಕೊಡ್ತಿಲ್ಲ. ಈ ಬಗ್ಗೆ ಅಮೆರಿಕ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹ ಮಾಡಿದ್ದಾರೆ. ಬರೀ ಭಾರತ ಮಾತ್ರವಲ್ಲ ವಿಯೆಟ್ನಾಮ್, ಮಲೇಶಿಯಾ, ಫಿಲಿಪ್ಪೀನ್ಸ್, ಬ್ರೂನೇ ಹಾಗೂ ತೈವಾನ್ ಜೊತೇನು ಚೀನಾ ಹೀಗೇ ದಾದಾಗಿರಿ ಮಾಡ್ತಿದೆ ಅಂತ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply