ವಿಶ್ವಸಂಸ್ಥೆಯಲ್ಲಿ ಹಿಂದಿ ಉತ್ತೇಜಿಸೋಕೆ ಭಾರತ ನೀಡಿದ ಹಣ ಎಷ್ಟು?

masthmagaa.com:

ದೇಶದಲ್ಲಿ ಹಿಂದಿ ವಿವಾದ ಚರ್ಚೆಯಲ್ಲಿರೋ ನಡುವೆಯೇ ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯ ಉತ್ತೇಜನ ಮತ್ತು ಅದ್ರ ಬಳಕೆಯನ್ನ ಹೆಚ್ಚಿಸೋಕೆ ಭಾರತ 8 ಲಕ್ಷ ಡಾಲರ್‌ ಅಂದ್ರೆ ಭಾರತದ ರೂಪಾಯಿಯಲ್ಲಿ ಸುಮಾರು 6 ಕೋಟಿಯನ್ನ UNಗೆ ಕೊಡುಗೆ ನೀಡಿದೆ. ಅಂದ್ಹಾಗೆ ಈ ಹಿಂದೆ 2018ರಲ್ಲಿ ವಿಶ್ವಾದ್ಯಂತ ಹಿಂದಿ ಮಾತಾಡೋ ಜನ್ರಿಗೆ ಯುಎನ್‌ ಬಗ್ಗೆ ಮಾಹಿತಿ ಪ್ರಸಾರ ಮಾಡೋಕೆ ಭಾರತ ʻಹಿಂದಿ @ UN’ ಯೋಜನೆ ಆರಂಭಿಸಿತ್ತು. ಈಗ ಅದಕ್ಕೆ ಭಾರತದ ವಿಶ್ವಸಂಸ್ಥೆ ಖಾಯಂ ಪ್ರತಿನಿಧಿ ಆರ್‌ ರವೀಂದ್ರ ಚೆಕ್‌ಅನ್ನ ಹಸ್ತಾಂತರಿಸಿದ್ದಾರೆ.

-masthmagaa.com

Contact Us for Advertisement

Leave a Reply