ಅಫ್ಘಾನ್‌ಗೆ ಭಾರತ ದೊಡ್ಡ ಸಹಾಯ: 1,00,00,000 ಕೆಜಿ ಗೋಧಿ ನೆರವು

masthmagaa.com:

ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಅಲ್ಲಿನ ಸ್ಥಿತಿ ಶೋಚನೀಯವಾಗಿರೋದು ಎಲ್ಲರಿಗೂ ತಿಳಿದಿರೋ ವಿಷಯ. ಅಲ್ದೇ ಇತ್ತೀಚೆಗೆ ಅಫ್ಘಾನ್‌ನಲ್ಲಿ ತೀವ್ರ ಆಹಾರ ಬಿಕ್ಕಟ್ಟು ಕೂಡ ಎದುರಾಗಿದೆ. ಎಲ್ಲರ ಕಷ್ಟ ಕಾಲದಲ್ಲಿ ಸಹಾಯ ಹಸ್ತ ಚಾಚೋ ಭಾರತ, ಇದೀಗ ಅಫ್ಘಾನ್‌ ಜನರಿಗೆ ಮತ್ತೆ ಸಹಾಯ ಮಾಡೋಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಭಾರತ ಅಫ್ಘಾನ್‌ಗೆ 10 ಸಾವಿರ ಮೆಟ್ರಿಕ್‌ ಟನ್‌ ಗೋಧಿಯನ್ನ ಕಳಿಸಿದೆ. ಇಂದು 10,000 ಮೆಟ್ರಿಕ್‌ ಟನ್‌ ಗೋಧಿ ಅಫ್ಘಾನ್‌ನ ಹೆರಾಟ್‌ ನಗರವನ್ನ ತಲುಪಿದೆ ಅಂತ ವಿಶ್ವಸಂಸ್ಥೆಯ ವರ್ಲ್ಡ್‌ ಫುಡ್‌ ಪ್ರೋಗ್ರಾಮ್‌ (WEP) ಹೇಳಿದೆ. ಈ ಕುರಿತು ಟ್ವೀಟ್‌ ಮಾಡಿರೋ WEP, ʻಗೋಧಿಯನ್ನ ಭಾರತ ಸರ್ಕಾರ ನೀಡಿದೆ. ಅಫ್ಘಾನಾದ್ಯಂತ ಹಸಿದಿರೋ ಕುಟುಂಬಗಳಿಗೆ ಈ ಗೋಧಿ ತಲುಪಲಿದೆ. ಇದು ಮಾನವೀಯತೆಯ ಭಾಗವಾಗಿ ಭಾರತ ಮಾಡಿರುವ ಸಹಾಯವಾಗಿದೆ. 2022ರಲ್ಲಿ ಭಾರತ 40 ಸಾವಿರ ಟನ್‌ ಗೋಧಿಯನ್ನ ಅಫ್ಘಾನ್‌ಗೆ ಕಳಿಸಿತ್ತುʼ ಅಂತ ಹೇಳಿದೆ. ಅಂದ್ಹಾಗೆ ಕಳೆದ ತಿಂಗಳು ಕೂಡ ಭಾರತ 20 ಸಾವಿರ ಮೆಟ್ರಿಕ್‌ ಟನ್‌ ಗೋಧಿಯನ್ನ ಅಫ್ಘಾನ್‌ಗೆ ಕಳಿಸಿತ್ತು.

 

-masthmagaa.com

Contact Us for Advertisement

Leave a Reply