ಭಾರತ ದೊಡ್ಡ ಲೀಡರ್‌ ಅಂತ ಹಾಡಿ ಹೊಗಳಿದ ಅಮೆರಿಕ

masthmagaa.com:

“ಭಾರತವು ಕ್ವಾಡ್‌ ಒಕ್ಕೂಟದ ಡ್ರೈವಿಂಗ್‌ ಫೋರ್ಸ್‌ ಇದ್ದಂತೆ ಮತ್ತು ಪ್ರಾದೇಶಿಕ ಬೆಳವಣಿಗೆಯ ಇಂಜಿನ್ ಇದ್ದಂತೆ ಅಂತ ಅಮೆರಿಕದ ವೈಟ್‌ ಹೌಸ್‌ ಭಾರತವನ್ನ ಹಾಡಿ ಹೊಗಳಿದೆ. ಇತ್ತೀಚಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ ನಲ್ಲಿ ನಡೆದ ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಬಳಿಕ ಅಮೆರಿಕ ಈ ರೀತಿ ಹೇಳಿದೆ. ವೈಟ್‌ ಹೌಸ್‌ ಡೆಪ್ಯೂಟಿ ಪ್ರೆಸ್‌ ಸೆಕ್ರಟ್ರಿ ಕರೀನ್‌ ಜೀನ್‌ ಪೀರೆ ಮಾತನಾಡಿ “ದಕ್ಷಿಣ ಏಷ್ಯಾ ಹಾಗು ಇಂಡೋ – ಫೆಸಿಫಿಕ್‌ ಭಾಗದಲ್ಲಿ ಭಾರತವು ಒಳ್ಳೇ ಪಾರ್ಟ್​ನರ್​ ಮತ್ತು ಲೀಡರ್‌ ಆಗಿದೆ. ಕ್ವಾಡ್‌ನಲ್ಲಿಯೂ ಭಾರತದ ಸ್ಥಾನ ಅತ್ಯಂತ‌ ನಿರ್ಣಾಯಕ. ದಕ್ಷಿಣ ಏಷ್ಯಾದ ಅಭಿವೃದ್ದಿಗೆ ಭಾರತವೇ ಇಂಜಿನ್ ಅಂತೆಲ್ಲಾ ಹೇಳಿದ್ದಾರೆ. ಅಲ್ದೆ”ಭಾರತ ಮತ್ತು ಅಮೆರಿಕ ಅತ್ಯುತ್ತಮ ಸ್ನೇಹಿತರಾಗಿದ್ದು ಈ ಭಾಗದಲ್ಲಿ ಭಾರತಕ್ಕೆ ಎಲ್ಲಾ ರೀತಿಯ ನೆರವನ್ನ ಅಮೆರಿಕಾ ನೀಡುತ್ತೆ” ಅಂತ ಹೇಳಿದ್ದಾರೆ. ಕ್ವಾಡ್​ ಅಂದ್ರೆ ಭಾರತ, ಅಮೆರಿಕ, ಜಪಾನ್​ ಮತ್ತು ಆಸ್ಟ್ರೇಲಿಯಾಗಳನ್ನ ಒಳಗೊಂಡಿರೋ ಒಕ್ಕೂಟ. ಚೀನಾವನ್ನ ಕಟ್ಟಿಹಾಕೋಕೆ ಏಷ್ಯಾದಲ್ಲಿ ಪರ್ಯಾಯ ಶಕ್ತಿಯನ್ನ ರೆಡಿ ಮಾಡ್ತಿದೆ ಅಮೆರಿಕ.

-masthmagaa.com

Contact Us for Advertisement

Leave a Reply