ಇರಾನ್​​ಗೆ ಹೋಗಿದ್ಯಾಕೆ ವಿದೇಶಾಂಗ ಸಚಿವ ಜೈಶಂಕರ್?

masthmagaa.com:

ಕತಾರ್ ಪ್ರವಾಸದಲ್ಲಿರೋ ವಿದೇಶಾಂಗ ಸಚಿವ ಎಸ್​​.ಜೈಶಂಕರ್​​ ರಷ್ಯಾಗೆ ತೆರಳೋ ಮುನ್ನ ಅಚಾನಕ್ಕಾಗಿ ಇರಾನ್​ಗೆ ಭೇಟಿ ನೀಡಿದ್ಧಾರೆ. ಈ ವೇಳೆ ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಶೇಷ ಅಂದ್ರೆ ಈ ಭೇಟಿಗೂ ಮುನ್ನ ಜಾವೇದ್ ಜರೀಫ್​​ ಅಫ್ಘಾನಿಸ್ತಾನ ಸರ್ಕಾರ ಮತ್ತು ತಾಲಿಬಾನಿಗಳ ಪ್ರತಿನಿಧಿಗಳ ನಡುವೆ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ರು. ಅದ್ರ ಬೆನ್ನಲ್ಲೇ ಜೈಶಂಕರ್ ಇರಾನ್​​ಗೆ ಹೋಗಿ ಜಾವೇದ್ ಜರೀಫ್ ಭೇಟಿಯಾಗಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತ ನ್ಯಾಟೋ ಸೇನೆ ಹಿಂತೆಗೆದ ಘೋಷಣೆ ಬಳಿಕ ಇಡೀ ವಿಶ್ವದ ಕಣ್ಣು ಅಫ್ಘಾನಿಸ್ತಾನದತ್ತ ನೆಟ್ಟಿದೆ. ಇದ್ರ ಜೊತೆಗೆ ಚುನಾಯಿತ ಅಧ್ಯಕ್ಷ ಇಬ್ರಾಹಿ ರೈಸಿಯನ್ನು ಭೇಟಿಯಾಗಿ, ಪ್ರಧಾನಿ ಮೋದಿಯವರ ವೈಯಕ್ತಿಕ ಸಂದೇಶವನ್ನು ಕೂಡ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ನಡೆದ ಇರಾನ್ ಅಧ್ಯಕ್ಷೀಯ ಚನಾವಣೆಯಲ್ಲಿ ಇಬ್ರಾಹಿಂ ರೈಸಿ ವಿನ್ ಆಗಿದ್ರು. ಇವರು ಆಗಸ್ಟ್​ನಲ್ಲಿ ಇರಾನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು ನಾಳೆ ಜೈಶಂಕರ್ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply