ಮೇ 1ರಂದು ಭಾರತಕ್ಕೆ ಸ್ಪುಟ್ನಿಕ್ 5 ಲಸಿಕೆ!

masthmagaa.com:

ಭಾರತದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗ್ತಿದ್ದು, ಲಸಿಕೆ ಕೊರತೆಯ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆಯೇ ಮೇ 1ರಂದು ಸ್ಪುಟ್ನಿಕ್ 5 ಲಸಿಕೆಯ ಮೊದಲ ಬ್ಯಾಚ್ ಭಾರತ ತಲುಪಲಿದೆ ಅಂತ ರಷ್ಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಮಾಹಿತಿ ನೀಡಿದ್ದಾರೆ. ಆದ್ರೆ ಎಲ್ಲಿ ಉತ್ಪಾದನೆಯಾದ ಲಸಿಕೆ ಬರುತ್ತೆ..? ಎಷ್ಟು ಡೋಸ್ ಬರುತ್ತೆ ಅಂತ ಅವರು ಮಾಹಿತಿ ನೀಡಿಲ್ಲ. ಯಾಕಂದ್ರೆ ಸ್ಪುಟ್ನಿಕ್ 5ನ್ನು ಅಂತಾರಾಷ್ಟ್ರೀಯವಾಗಿ ಮಾರ್ಕೆಟಿಂಗ್ ಮಾಡ್ತಿರೋ ರಷ್ಯನ್ ಡೈರೆಕ್ಟ್​ ಇನ್ವೆಸ್ಟ್​ಮೆಂಟ್ ಫಂಡ್, ಈಗಾಗಲೇ ಭಾರತದ 5 ಲಸಿಕೆ ಉತ್ಪಾದಕ ಸಂಸ್ಥೆಗಳೊಂದಿಗೆ ವರ್ಷಕ್ಕೆ 85 ಕೋಟಿ ಡೋಸ್ ಲಸಿಕೆ ಉತ್ಪಾದಿಸಲು ಸಹಿ ಹಾಕಿದೆ. ಸದ್ಯಕ್ಕೆ ತಿಂಗಳಿಗೆ 5 ಕೋಟಿ ಡೋಸ್ ಉತ್ಪಾದನೆ ಮಾಡಲಿದ್ದು, ನಂತರದಲ್ಲಿ ಉತ್ಪಾದನೆ ಹೆಚ್ಚಿಸಲಾಗುತ್ತೆ ಅಂತಲೂ ಸಂಸ್ಥೆ ತಿಳಿಸಿದೆ.

-masthmagaa.com

Contact Us for Advertisement

Leave a Reply