ಬಿಸಿಸಿಐನ ಮಹತ್ವದ ನಿರ್ಧಾರ! ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಪಂದ್ಯ ಶುಲ್ಕ!

masthmagaa.com:

ಭಾರತೀಯ ಮಹಿಳಾ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಬಿಸಿಸಿಐ ಐತಿಹಾಸಿಕ ಘೋಷಣೆ ಒಂದನ್ನ ಮಾಡಿದೆ. ಟೀಂ ಇಂಡಿಯಾದ ಪುರುಷ ಆಟಗಾರರಿಗೆ ನೀಡೊ ಪಂದ್ಯದ ಶುಲ್ಕವನ್ನ ಮಹಿಳಾ ಕ್ರಿಕೆಟ್‌ ಪ್ಲೇಯರ್‌ಗಳಿಗೂ ನೀಡಲು ಬಿಸಿಸಿಐ ಮುಂದಾಗಿದೆ. ಅಂದ್ರೆ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್‌ ಕೌರ್‌ ಅಂತಹ ಆಟಗಾರರ ಪಂದ್ಯದ ಶುಲ್ಕ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಪಡೆದುಕೊಳ್ಳೊ ಮ್ಯಾಚ್‌ ಫೀಗೆ ಸಮನಾಗಿರುತ್ತೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಟ್ವೀಟ್‌ ಮಾಡಿದ್ದಾರೆ. ಅದ್ರಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಪಂದ್ಯ ಶುಲ್ಕವನ್ನು ಒಂದೇ ರೀತಿಯಲ್ಲಿ ನೀಡಬೇಕೆಂದು ಬಹುದಿನಗಳಿಂದ ಬೇಡಿಕೆಯಿತ್ತು. ಇದೀಗ ಬಿಸಿಸಿಐ ಅದನ್ನ ಈಡೇರಿಸಿದೆ. ಜೊತೆಗೆ ತಾರತಮ್ಯದ ವಿರುದ್ಧ ಬಿಸಿಸಿಐ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಅಂತ ತಿಳಿಸೋಕೆ ನನಗೆ ತುಂಬಾ ಸಂತೋಷವಾಗಿದೆ ಅಂತ ಹೇಳಿದ್ದಾರೆ. ಈ ಹೊಸ ರೂಲ್‌ ಪ್ರಕಾರ ಮಹಿಳಾ ಕ್ರಿಕೆಟಿಗರು ಪ್ರತಿ ಟೆಸ್ಟ್ ಪಂದ್ಯ ಆಡೋಕೆ 15 ಲಕ್ಷ ರೂಪಾಯಿ, ಒಂದು ಏಕದಿನ ಪಂದ್ಯಕ್ಕೆ 6 ಲಕ್ಷ ಹಾಗೂ ಒಂದು ಟಿ20 ಪಂದ್ಯವನ್ನಾಡಲು 3 ಲಕ್ಷ ರೂಪಾಯಿಯನ್ನ ಪಡೆಯಲ್ಲಿದ್ದಾರೆ. ಈ ಹಿಂದೆ ಒಂದು ಟೆಸ್ಟ್ ಪಂದ್ಯಕ್ಕೆ 4 ಲಕ್ಷ ರೂಪಾಯಿ, ಪ್ರತಿ ಏಕದಿನ ಪಂದ್ಯಕ್ಕೆ 2 ಲಕ್ಷ ಮತ್ತು ಟಿ 20 ಪಂದ್ಯಕ್ಕೆ 2.5 ಲಕ್ಷ ಪಡೆಯುತ್ತಿದ್ದರು. ಅಂದ್ಹಾಗೆ ನ್ಯೂಜಿಲೆಂಡ್ ನಂತರ ಇಂತಹ ಘೋಷಣೆ ಮಾಡಿದ ಎರಡನೇ ಕ್ರಿಕೆಟ್ ಮಂಡಳಿ BCCI ಆಗಿದೆ.

-masthmagaa.com

Contact Us for Advertisement

Leave a Reply