ಟ್ರೋಫಿ ವನವಾಸ…6 ವರ್ಷಗಳಿಂದ ಟ್ರೋಫಿ ಗೆಲ್ಲದ ಟೀಂ ಇಂಡಿಯಾ..!

ಭಾರತೀಯ ವನಿತೆಯರು ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಫೈನಲ್​​​ಗೆ ಹೋಗಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದಾರೆ. ಈ ಮೂಲಕ ಟ್ರೋಫಿ ವಿಚಾರದಲ್ಲಿ ಭಾರತ ಎದುರಿಸುತ್ತಿರುವ 6 ವರ್ಷಗಳ ವನವಾಸವನ್ನು ಹಾಗೆ ಮುಂದುವರಿಸಿದೆ. ಹೌದು..2014ರ ಬಳಿಕ ಭಾರತದ ಪುರುಷ ಮತ್ತು ಮಹಿಳಾ ತಂಡ ಯಾವುದೇ ಮಹತ್ವದ ಟ್ರೋಫಿಯನ್ನು ಗೆದ್ದಿಲ್ಲ.

2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಆದ್ರೆ ನಂತರದಲ್ಲಿ ಭಾರತ 2014ರ ಟಿ-20 ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್​​​ಗೆ ಹೋಗಿ ಸೋತುಹೋಯ್ತು. ನಂತರ 2015ರ ವಿಶ್ವಕಪ್, 2016ರ ಟಿ-20 ವಿಶ್ವಕಪ್​ ಮತ್ತು 2019ರ ವಿಶ್ವಕಪ್​ನಲ್ಲಿ ಸೆಮಿಫೈನಲ್​​ಗೆ ಹೋಗಿ ಮುಗ್ಗರಿಸಿತು. ಅದೇ ರೀತಿ ಮಹಿಳಾ ತಂಡ 2017ರ ಏಕದಿನ ಮತ್ತು 2020ರ ಟಿ-20 ವಿಶ್ವಕಪ್​​ನಲ್ಲಿ ಫೈನಲ್​​​ಗೆ ಹೋದ್ರೂ ಗೆಲುವು ಸಾಧ್ಯವಾಗಲಿಲ್ಲ. ಅದೇ ರೀತಿ 2018ರಲ್ಲಿ ಸೆಮಿಫೈನಲ್​​​ಗೆ ಹೋಗಿ ಸೋಲು ಕಂಡಿತ್ತು. ಹೀಗೆ ಕಳೆದ 6 ವರ್ಷಗಳಿಂದ ಭಾರತದ ಟ್ರೋಫಿ ಗೆಲ್ಲೋ ಕನಸು ಕನಸಾಗೇ ಉಳಿದಿದೆ.

Contact Us for Advertisement

Leave a Reply