ಅಮೆರಿಕ ಮ್ಯಾಗಜೀನ್‌ನಲ್ಲಿ ಮೋದಿ ಇಂಟರ್‌ವ್ಯೂ! ಚೀನಾ ಬಗ್ಗೆ ಮಾತು!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಚೀನಾ ಗಡಿ ಸಮಸ್ಯೆ ಕುರಿತು ಪ್ರಧಾನಿ ಮೋದಿ ಮಾತಾಡಿದ್ದಾರೆ. ಚೀನಾ ಜೊತೆಗಿನ ಸಂಬಂಧ ಭಾರತಕ್ಕೆ ಬಹಳ ಇಂಪಾರ್ಟೆಂಟ್‌ ಅಂತೇಳಿದ್ದಾರೆ. ಅಮೆರಿಕದ ಪ್ರತಿಷ್ಠಿತ ನ್ಯೂಸ್‌ವೀಕ್‌ ಮ್ಯಾಗಜೀನ್‌ಗೆ ಮೋದಿ ಇಂಟರ್‌ವ್ಯೂ ಕೊಟ್ಟಿದ್ರು. ಅದರಲ್ಲಿ Narendra Modi and the Unstoppable Rise of India ಅಂತ ಶೀರ್ಷಿಕೆ ಕೊಟ್ಟು ಆ ಇಂಟರ್‌ವ್ಯೂವನ್ನ ಪ್ರಕಟ ಮಾಡಲಾಗಿದೆ. ʻಉಭಯ ದೇಶಗಳ ನಡುವಿನ ದೀರ್ಘಕಾಲದ ಗಡಿ ಸಂಘರ್ಷ ಬಗ್ಗೆ ಅರ್ಜೆಂಟ್‌ ಆಗಿ ಮಾತುಕತೆ ನಡೆಸಬೇಕು… ದ್ವಿಪಕ್ಷೀಯ ಸಂಬಂಧ ಸರಿಪಡಿಸಿಕೊಳ್ಳೋದು ತೀರ ಅಗತ್ಯ. ಸ್ಥಿರ ಮತ್ತು ಶಾಂತಿಯುತವಾದ ಸಂಬಂಧ ಕೇವಲ ಭಾರತ ಮತ್ತು ಚೀನಾಗೆ ಮಾತ್ರ ಇಂಪಾರ್ಟೆಂಟ್‌ ಅಲ್ಲ. ಅದು ಇಡೀ ಜಗತ್ತಿಗೆ ಮಹತ್ವದ್ದಾಗಿದೆ. ಸೋ… ರಾಜತಾಂತ್ರಿಕ ಮತ್ತು ಮಿಲಿಟರಿ ಲೆವಲ್‌ನಲ್ಲಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯಿಂದ ವಿವಾದಿತ ಗಡಿ ಭಾಗದಲ್ಲಿ ಪುನಃ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸೋಕೆ ಸಾಧ್ಯವಾಗುತ್ತೆ..ಹೀಗಂತ ನಾನು ಭಾವಿಸ್ತೇನೆʼ ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮೂಲಕ ಚೀನಾ ಜೊತೆಗೆ ಗಡಿ ಸಂಘರ್ಷ ತೀವ್ರವಾಗ್ತಿರೋ ಟೈಮಲ್ಲೇ ಮೋದಿ ಮಾತಾಡಿರೋದು ಮಹತ್ವ ಪಡ್ಕೊಂಡಿದೆ. ಯಾಕಂದ್ರೆ ಇತ್ತೀಚಿನ ವರ್ಷಗಳಲ್ಲಿ ಬಾರ್ಡರ್‌ನಲ್ಲಿ ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ಉದ್ವಿಗ್ನತೆ ಜಾಸ್ತಿ ಅಗ್ತಾ ಇದೆ. ಮೇ 2020ರಲ್ಲಿ ನಡೆದ ಗಲ್ವಾನ್‌ ಸಂಘರ್ಷದ ನಂತ್ರ ಉಭಯ ದೇಶಗಳ ಸಂಬಂಧದಲ್ಲಿ ದೊಡ್ಡ ಬಿರುಕು ಮೂಡಿದೆ. ಮೊನ್ನೆ ಕೂಡ ಚೀನಾ ಅರುಣಾಚಲ ವಿಚಾರವಾಗಿ ಹೆಸರು ಬದಲಾಯಿಸಿ ಭಾರತವನ್ನ ಕೆಣಕೋ ಕೆಲಸ ಮಾಡಿತ್ತು. ಭಾರತ ಕೂಡ ಅದಕ್ಕೆ ತಿರುಗೇಟು ಕೊಟ್ಟಿತ್ತು. ಪಾಶ್ಚಿಮಾತ್ಯ ಮಾಧ್ಯಮಗಳು ಭಾರತ ಚೀನಾ ನಡುವೆ ಯುದ್ದವೇ ಆಗಬೋದು ಅನ್ನೋ ಭಯಾನಕ ಭವಿಷ್ಯವನ್ನೂ ನುಡೀತಾ ಇವೆ. ಇಂಥ ಹೊತ್ತಲ್ಲೇ ಚೀನಾ ಗಡಿ ಕುರಿತು ಮೋದಿಯವರು ಮಾತಾಡಿರೋದು ಮಹತ್ವ ಪಡ್ಕೋತಿದೆ.

ಇನ್ನು ಇದೇ ಇಂಟರ್‌ವ್ಯೂನಲ್ಲಿ ಮೋದಿಯವರು ಪಾಕಿಸ್ತಾನದ ವಿಚಾರವಾಗಿಯೂ ಹೇಳಿಕೆ ಕೊಟ್ಟಿದ್ದಾರೆ. ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರೋ ಶೆಹಬಾಜ್‌ ಶರೀಫ್‌ ಅವ್ರಿಗೆ ತಾವು ಅಭಿನಂದಿಸಿರೋ ಬಗ್ಗೆ ಹೇಳ್ಕೊಂಡಿದ್ದಾರೆ. ಜೊತೆಗೆ, ʻಭಾರತ ಸದಾ, ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತವಾಗಿ ಇರಬೇಕು ಅಂತ ಬಯಸುತ್ತೆ. ಶಾಂತಿ, ಭದ್ರತೆ ಮತ್ತು ಸಮೃದ್ಧಿ ಹೆಚ್ಚಿಸೋಕೆ ಬೆಂಬಲ ನೀಡುತ್ತೆʼ ಅಂತೇಳಿದ್ದಾರೆ. ಇನ್ನು ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವ್ರ ಬಂಧನ ಬಗ್ಗೆ ಪ್ರಶ್ನೆ ಮಾಡಿದಾಗ ಅದು ʻಪಾಕಿಸ್ತಾನದ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡಲ್ಲʼ ಅಂದಿದ್ದಾರೆ. ಇನ್ನು ʻಕ್ವಾಡ್‌ʼ ಒಕ್ಕೂಟದ ಬಗ್ಗೇನೂ ನರೇಂದ್ರ ಮೋದಿಯವ್ರ ಮುಂದೆ ಪ್ರಶ್ನೆ ಇಡಲಾಯ್ತು. ಈ ಬಗ್ಗೆ ಮಾತಾಡಿ, ʻಇತರೆ ಹಲವು ಒಕ್ಕೂಟದಂತೆ ಕ್ವಾಡ್‌ ಕೂಡ ಒಂದು ಒಕ್ಕೂಟವಾಗಿದೆ. ಇದು ಯಾವ್ದೇ ಒಂದು ದೇಶದ ವಿರುದ್ಧ ರಚಿಸಲಾದ ಗುಂಪಲ್ಲ. ಇದ್ರಂತೆ ನಾವು ಹಲವು SCO, BRICSಗಳಂತಹ ಒಕ್ಕೂಟಗಳಲ್ಲಿಯೂ ಭಾಗಿಯಾಗಿದ್ದೇವೆʼ ಅಂದಿದ್ದಾರೆ. ಅಲ್ದೆ ಅಯೋಧ್ಯೆ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಬಗ್ಗೆನೂ ಮೋದಿ ಮಾತನಾಡಿದ್ದಾರೆ. ʻಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಶತಮಾನಗಳ ಪರಿಶ್ರಮ ಮತ್ತು ತ್ಯಾಗದ ಪರಾಕಾಷ್ಠೆʼ ಅಂತೇಳಿದ್ದಾರೆ. ಜೊತೆಗೆ ʻಆರ್ಟಿಕಲ್‌ 370 ರದ್ದತಿಯಿಂದ ಜಮ್ಮು & ಕಾಶ್ಮೀರದಲ್ಲಿ ಆದಂತಹ ಬದಲಾವಣೆಗಳನ್ನ ಪ್ರತ್ಯಕ್ಷವಾಗಿ ವೀಕ್ಷಿಸಲು ನೀವು ಅಲ್ಲಿಗೆ ಭೇಟಿ ನೀಡಿ. ನಾನು ಅಥ್ವಾ ಬೇರೆ ಯಾರೇ ಹೇಳಿರೋದನ್ನ ನಂಬೋಕೆ ಹೋಗ್ಬೇಡಿ….ಖುದ್ದಾಗಿ ನೀವೇ ಭೇಟಿ ನೀಡಿ ಪರಿಶೀಲಿಸಿʼ ಅಂತ ಅಮೆರಿಕ ಪತ್ರಕರ್ತರಿಗೆ ಕರೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply