ಕೊರೋನಾಗೆ ಭಾರತದಲ್ಲಿ ಮೊದಲ ವೈದ್ಯ ಬಲಿ..!

masthmagaa.com:

ಮಧ್ಯಪ್ರದೇಶ: ಭಾರತದಲ್ಲಿ ಕೊರೋನಾಗೆ ಮೊದಲ ವೈದ್ಯ ಬಲಿಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್​​ನಲ್ಲಿ ಈ ಘಟನೆ ವರದಿಯಾಗಿದೆ. 55 ವರ್ಷದ ಶತ್ರುಘ್ನನ್ ಪಂಜ್ವಾನಿ ಮೃತ ವೈದ್ಯ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಇವರಿಗೂ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಇವರನ್ನು ಅರವಿಂದೋ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಇನ್ನು ಇವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದು, ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply