masthmagaa.com:

ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ತಲೆಬಿಸಿ ಶುರುವಾಗಿರೋ ನಡುವೆಯೇ ಕಳೆದ 24 ಗಂಟೆಗಳಲ್ಲಿ 28,903 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. 188 ಸೋಂಕಿತರು ಮೃತಪಟ್ಟಿದ್ದಾರೆ. ಇದು ಕಳೆದ ವರ್ಷದ ಡಿಸೆಂಬರ್ 13ರ ಬಳಿಕ ದೃಢಪಟ್ಟ ಅತಿಹೆಚ್ಚು ಕೊರೋನಾ ಕೇಸ್ ಆಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಮೊದಲ ಬಾರಿ ಕೊರೋನಾ ಪ್ರಕರಣಗಳ ಸಂಖ್ಯೆ 28 ಸಾವಿರ ದಾಟಿತ್ತು. ಇದೀಗ ಎರಡನೇ ಅಲೆ ಟೈಮಲ್ಲಿ ಮತ್ತೊಮ್ಮೆ 28 ಸಾವಿರದ ಗಡಿ ದಾಟಿದೆ. ಇದರಲ್ಲಿ ಮಹಾರಾಷ್ಟ್ರ ಒಂದರಲ್ಲೇ 17,864 ಕೇಸ್ ವರದಿಯಾಗಿದೆ. ಕೇರಳದಲ್ಲಿ 1,970 ಮತ್ತು ಪಂಜಾಬ್​ನಲ್ಲಿ 1,463. ಅದನ್ನ ಬಿಟ್ಟರೆ ಕರ್ನಾಟಕ, ಗುಜರಾತ್, ತಮಿಳುನಾಡಿನಲ್ಲಿ ಕೊರೋನಾ ಹೆಚ್ಚಾಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಗುಜರಾತ್​ನ ಅಹಮದಾಬಾದ್​ನಲ್ಲಿ ಪಾರ್ಕ್, ಝೂ​ಗಳನ್ನ ಬಂದ್ ಮಾಡಲಾಗಿದೆ.

ದೇಶದ ಕೊರೋನಾ ನಂಬರ್ಸ್:

ಕಳೆದ 24 ಗಂಟೆ ಪ್ರಕರಣ: 28,903

ಕಳೆದ 24 ಗಂಟೆ ಗುಣಮುಖ: 17,741

ಕಳೆದ 24 ಗಂಟೆ ಸಾವು: 188

ಕಳೆದ 24 ಗಂಟೆ ಪರೀಕ್ಷೆ: 9.69 ಲಕ್ಷ

ಒಟ್ಟು ಪ್ರಕರಣ: 1.14 ಕೋಟಿ

ಒಟ್ಟು ಗುಣಮುಖ: 1.10 ಕೋಟಿ

ಒಟ್ಟು ಸಾವು: 1,59,044

ಒಟ್ಟು ಪರೀಕ್ಷೆ: 22.92 ಕೋಟಿ

ಒಟ್ಟು ಲಸಿಕೆ ಪಡೆದವರು: 3.50 ಕೋಟಿ

ಒಟ್ಟು ಜನಸಂಖ್ಯೆ: 135 ಕೋಟಿ

-masthmagaa.com

Contact Us for Advertisement

Leave a Reply