ದೇಶದಲ್ಲೇ ನಿರ್ಮಾಣ ಆಗಲಿರುವ 5G ಫೈಟರ್‌ಗಳು!

masthmagaa.com:

ಭಾರತದ ಸೇನಾ ಕ್ಷೇತ್ರವನ್ನ ಬಲಿಷ್ಠಗೊಳಿಸುವ ಹಾದಿಯಲ್ಲಿ ಮಹತ್ವದ ಬೆಳವಣಿಗೆಯಾಗ್ತಿದೆ. 5TH ಜನರೇಶನ್‌ನ ಸ್ಟೆಲ್ತ್ ಯುದ್ದ ವಿಮಾನಗಳನ್ನ ನಿರ್ಮಿಸೊ ಯೋಜನೆ ಶೀಘ್ರದಲ್ಲೇ ಪ್ರಧಾನಿ ನೇತೃತ್ವದ ಭದ್ರತಾ ಸಮಿತಿ ಮುಂದೆ ಅನುಮೋದನೆಗೆ ಹೋಗಲಿದೆ ಅಂತ ಹೇಳಲಾಗಿದೆ. 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎರಡು ಇಂಜಿನ್‌ಗಳು ಇರುವ ಅತ್ಯಾಧುನಿಕ ಏರ್‌ಕ್ರಾಫ್ಟ್‌ನ್ನ ದೇಶೀಯವಾಗಿ ತಯಾರಿಸೊ ಯೋಜನೆ ಇದಾಗಿದೆ. ಭದ್ರತಾ ಸಮಿತಿ ಅನುಮೋದನೆ ಕೊಟ್ಟ ಬಳಿಕ ಪ್ರಾಜೆಕ್ಟ್‌ನ ಮೊದಲ ಏರ್‌ಕ್ರಾಫ್ಟ್‌ ಪ್ರೊಟೋಟೈಪ್‌ನ ಕೆಲಸ ಮುಂದಿನ 4 ವರ್ಷದ ಒಳಗೆ ಮುಗಿಯಲಿದೆ. ಇದಾದ 6 ವರ್ಷದ ಬಳಿಕ ಪ್ರೊಡಕ್ಶನ್‌ ಸ್ಟಾರ್ಟ್‌ ಆಗುತ್ತೆ. ಭಾರತೀಯ ವಾಯುಸೇನೆ 2035ರ ನಂತರ ಈ ಏರ್‌ಕ್ರಾಫ್ಟ್‌ಗಳನ್ನ ಪಡೆಯಲಿದೆ ಅಂತ ಹೇಳಲಾಗಿದೆ. ಇನ್ನು ಪ್ರಸ್ತುತ ಅಮೆರಿಕದ F 22 ರ್ಯಾಪ್ಟರ್, F -35, ಚೀನಾದ ಚೆಂಗ್ಡು J-20 ಹಾಗೂ ರಷ್ಯಾದ ಸುಖೋಯ್‌-57, ಜಗತ್ತಿನಲ್ಲಿರೋ 5ನೇ ತಲೆಮಾರಿನ ಜೆಟ್‌ಗಳಾಗಿವೆ. ಸ್ಟ್ರಾಟಜಿಕ್‌ ಭಾಗವಾಗಿ ಇತ್ತೀಚೆಗೆ ನಡೆದ ಏರೋ ಇಂಡಿಯಾ ಶೋನಲ್ಲಿ ಅಮೆರಿಕ F-35 ಜೆಟ್‌ಗಳನ್ನ ಕಳಿಸಿದೆ. ಆದ್ರೆ ನಾವು ಸ್ವಂತವಾಗಿಯೇ 5ನೇ ತಲೆಮಾರಿನ ಜೆಟ್‌ಗಳನ್ನ ಪಡೆಯಲಿದ್ದೇವೆ ಅಂತ ಸರ್ಕಾರಿ ಮೂಲಗಳು ತಿಳಿಸಿವೆ. ಅಂದ್ಹಾಗೆ ಈಗಾಗಲೇ AMCA ಹೆಸರಿನಲ್ಲಿ ಡಿಆರ್‌ಡಿಒ ಐದನೇ ತಲೆಮಾರಿನ ಯುದ್ದ ವಿಮಾನವನ್ನ ನಿರ್ಮಾಣ ಮಾಡೋಕೆ ಹೊರಟಿದ್ದು 2021ರ ಏರೋ ಇಂಡಿಯಾ ಶೋನಲ್ಲಿ ಅದರ ಮಾಡೆಲ್‌ನ್ನ ಕೂಡ ಪ್ರದರ್ಶನ ಮಾಡಲಾಗಿತ್ತು. ಇದರ ವೆಚ್ಚ ಹಾಗೂ ಡಿಸೈನ್‌ ಫೈನಲ್‌ ಆಗಿದ್ದು, ಭದ್ರತಾ ಸಮಿತಿ ಒಪ್ಪಿಗೆ ನೀಡಬೇಕಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಭಾರತದ ವಾಯುಸೇನೆ ಕೇವಲ 31 ಫೈಟರ್‌ ಸ್ಕ್ವಾಡ್ರನ್‌ಗಳನ್ನ ಹೊಂದಿದ್ದು, ಪಾಕ್‌ ಹಾಗೂ ಚೀನಾವನ್ನ ಎದುರಿಸಲು ಕನಿಷ್ಠ 42 ಸ್ಕ್ವಾಡ್ರನ್‌ಗಳ ಅವಶ್ಯಕತೆಯಿದೆ . ಈ ನಿಟ್ಟಿನಲ್ಲಿ ಮುಂಬರೋ ದಿನಗಳಲ್ಲಿ 83 ತೇಜಸ್‌ ಮಾರ್ಕ್‌-1A, 108 ತೇಜಸ್‌ ಮಾರ್ಕ-2, 114 ಮಲ್ಟಿ ರೋಲ್‌ ಫೈಟರ್‌ ಏರ್‌ಕ್ರಾಫ್ಟ್‌ ಹಾಗೂ 16 ಅಡ್ವಾನ್ಸ್ಡ್‌ ಮೀಡಿಯಂ ಕೊಂಬಾಟ್‌ ಏರ್‌ಕ್ರಾಫ್ಟ್‌ಗಳನ್ನ ವಾಯುಸೇನೆಗೆ ಸೇರಿಸೋಕೆ ಭಾರತ ಯೋಜನೆ ಹಾಕಿಕೊಂಡಿದೆ.

-masthmagaa.com

Contact Us for Advertisement

Leave a Reply